* ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವಕ್ಕೆ ವಿಶೇಷ ಸಿದ್ಧತೆ* ನ.1ರಂದು ಕುಂದಾನಗರಿಯ ಎಲ್ಲಾ ಹೋಟೆಲ್'ಗಳಲ್ಲಿ ಶೇ.20 ರಿಯಾಯಿತಿ* ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಶಶಿಧರ್ ಕುರೇರ್ ಮನವಿಗೆ ಸ್ಪಂದಿಸಿದ ಹೋಟೆಲ್ ಮಾಲಕರು
ಬೆಳಗಾವಿ(ಅ. 31): ಕನ್ನಡ ರಾಜ್ಯೋತ್ಸವಕ್ಕೆ ಕುಂದಾನಗರಿ ಬೆಳಗಾವಿ ಈ ಬಾರಿ ವಿಶೇಷವಾಗಿ ಸಜ್ಜಾಗಿದೆ. ಅವತ್ತೊಂದು ದಿನ, ನವೆಂಬರ್ 1ರಂದು ಹೋಟೆಲ್ ತಿಂಡಿ ತಿನಿಸುಗಳ ಬೆಲೆಯಲ್ಲಿ ಶೇಕಡಾ 20ರಷ್ಟು ರಿಯಾಯಿತಿ ನೀಡಲು ಹೋಟೆಲ್ ಮಾಲೀಕರು ಮುಂದಾಗಿದ್ದಾರೆ. ಈ ಮೂಲಕ ಕನ್ನಡದ ಮೇಲಿರುವ ತಮ್ಮ ಅಭಿಮಾನವನ್ನು ಪ್ರದರ್ಶಿಸಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಶಶಿಧರ್ ಕುರೇರ್ ಅವ್ರು ಹೋಟೆಲ್ ಮಾಲೀಕರ ಸಭೆ ಕರೆದು, ಹೋಟೆಲ್'ಗಳನ್ನ ಸ್ವಚ್ಚವಾಗಿಡಬೇಕು, ರಾಜ್ಯೋತ್ಸವದಂದು ಒಂದು ದಿನ ತಿಂಡಿ ತಿನಿಸುಗಳ ಮೇಲೆ ಶೇಕಡಾ 20 ಪರ್ಸೆಂಟ್ ಕಡಿತಗೊಳಿಸಬೇಕೆಂದಾಗ, ಎಲ್ಲ ಹೋಟೆಲ್ ಮಾಲೀಕರು ಒಪ್ಪಿಗೆ ಕೊಟ್ಟಿದ್ದಾರೆ. ಹೀಗಾಗಿ ಗ್ರಾಹಕರಿಗೆ ರಾಜ್ಯೋತ್ಸವ ಆಫರ್ ಸಿಕ್ಕಂತಾಗಿದೆ.
ಈ ಬಾರಿ ಅದ್ದೂರಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಜಿಲ್ಲಾಡಳಿತ ಮತ್ತು ಬೆಳಗಾವಿ ಮಹಾನಗರ ಪಾಲಿಕೆ ಮುಂದಾಗಿದ್ದು, ಇಡೀ ಬೆಳಗಾವಿ ನಗರ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ.
