ಹೋಟೆಲ್ ಮಾಲೀಕನ ಮೇಲೆ ಎಸಿಪಿ ಹಲ್ಲೆ ಪ್ರಕರಣ ಕುರಿತು ಹೋಟೆಲ್ ಮಾಲೀಕ ರಾಜೀವ್ ಶೆಟ್ಟಿ ಜೆಸಿ ನಗರ ಉಪವಿಭಾಗ ಎಸಿಪಿ ಮಂಜುನಾಥ್ ಬಾಬು ವಿರುದ್ಧ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ  ದೂರು ದಾಖಲಿಸಿದ್ದಾರೆ.

ಬೆಂಗಳೂರು (ನ.19): ಹೋಟೆಲ್ ಮಾಲೀಕನ ಮೇಲೆ ಎಸಿಪಿ ಹಲ್ಲೆ ಪ್ರಕರಣ ಕುರಿತು ಹೋಟೆಲ್ ಮಾಲೀಕ ರಾಜೀವ್ ಶೆಟ್ಟಿ ಜೆಸಿ ನಗರ ಉಪವಿಭಾಗ ಎಸಿಪಿ ಮಂಜುನಾಥ್ ಬಾಬು ವಿರುದ್ಧ ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನನ್ನ ಮತ್ತು ನನ್ನ ಸಿಬ್ಬಂದಿ ಮೇಲೆ ಎಸಿಪಿ ಮಂಜುನಾಥ್ ಬಾಬು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಕಾನೂನು ಉಲ್ಲಂಘನೆ ಮಾಡಿ, ಸಮಾಜದಲ್ಲಿ ಕೆಟ್ಟ ಸಂದೇಶ ನೀಡುವ ವರ್ತನೆ ಮಾಡಿದ್ದಾರೆ ಎಂದು ರಾಜೀವ್ ಶೆಟ್ಟಿ ಆರೋಪಿಸಿದ್ದಾರೆ. ಎಸಿಪಿ ಹಲ್ಲೆ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಹಲ್ಲೆಯ ದೃಶ್ಯವಾಳಿಯ ಸಿಡಿಗಳನ್ನು ರಾಜೀವ್​ಶೆಟ್ಟಿ ಪೊಲೀಸರಿಗೆ ನೀಡಿದ್ದಾರೆ.

ಎಸಿಪಿ ಜತೆ ರಾಜಿ ಮಾಡಿಕೊಳ್ಳುವಂತೆ ನನ್ನ ಮೇಲೆ ಕೆಲವರು ನಿರಂತರವಾಗಿ ಒತ್ತಡ ಹೇರುತ್ತಿದ್ದಾರೆ. ಯಾವುದೇ ಕಾರಣಕ್ಕೂ ಒತ್ತಡಕ್ಕೆ ನಾನು ಮಣಿಯಲ್ಲ, ನನಗೆ ನ್ಯಾಯಬೇಕು. 1 ಗಂಟೆಯವರೆಗೂ ಹೋಟೆಲ್ ಓಪನ್ ಮಾಡುವ ಅವಕಾಶವಿದೆ. ಹೀಗಿದ್ದರೂ ಎಸಿಪಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಪ್ರಕರಣದ ಬಗ್ಗೆ ಹಿರಿಯ ಅಧಿಕಾರಿಗಳು ಉನ್ನತ ಮಟ್ಟದ ತನಿಖೆ ನಡೆಸುತ್ತಿದ್ದಾರೆ ಎಂದು ಸುವರ್ಣ ನ್ಯೂಸ್​ಗೆ ಹೋಟೆಲ್​ ಮಾಲೀಕ ರಾಜೀವ್ ಶೆಟ್ಟಿ ಹೇಳಿದ್ದಾರೆ.