Asianet Suvarna News Asianet Suvarna News

GST ದಿಂದ ಹೊಟೇಲ್'ನ ಊಟ, ತಿಂಡಿ ದರ ದುಪ್ಪಟ್ಟು: ಪುಟ್ಪಾತ್ ಹೊಟೇಲ್'ಗಳ ಮೊರೆ ಹೋದ ಗ್ರಾಹಕರು

ಜಿಎಸ್'ಟಿ ಜಾರಿಗೆ ಬಂದಿದ್ದೆ ತಡ, ಹೋಟೆಲ್'ಗೆ ತೆರಳಲು ಗ್ರಾಹಕರು ಹಿಂದೇಟಾಗ್ತಿದ್ದಾರೆ. ಅದಕ್ಕೆ ತಕ್ಕಂತೆ ಊಟ ಮತ್ತು ತಿನಿಸುಗಳ ದರ ಕೂಡ ದುಪ್ಪಟ್ಟಾಗಿದೆ. ಇದರ ಪರಿಣಾಮ ಇದೀಗ ಹೋಟೆಲ್ ಮಾಲೀಕರು ಅನುಭವಿಸುವಂತಾಗಿದೆ. ಇದರೊಂದಿಗೆ ಈ ಹತ್ತು ದಿನಗಳಲ್ಲಿ ಹೋಟೆಲ್ ಉದ್ಯಮ ಭಾರೀ ನಷ್ಟವನ್ನನುಭವಿಸಿದೆ .

Hotel Business Is Getting Dull Due To GST

ಬೆಂಗಳೂರು(ಜು10): ಜಿಎಸ್'ಟಿ ಜಾರಿಗೆ ಬಂದಿದ್ದೆ ತಡ, ಹೋಟೆಲ್'ಗೆ ತೆರಳಲು ಗ್ರಾಹಕರು ಹಿಂದೇಟಾಗ್ತಿದ್ದಾರೆ. ಅದಕ್ಕೆ ತಕ್ಕಂತೆ ಊಟ ಮತ್ತು ತಿನಿಸುಗಳ ದರ ಕೂಡ ದುಪ್ಪಟ್ಟಾಗಿದೆ. ಇದರ ಪರಿಣಾಮ ಇದೀಗ ಹೋಟೆಲ್ ಮಾಲೀಕರು ಅನುಭವಿಸುವಂತಾಗಿದೆ. ಇದರೊಂದಿಗೆ ಈ ಹತ್ತು ದಿನಗಳಲ್ಲಿ ಹೋಟೆಲ್ ಉದ್ಯಮ ಭಾರೀ ನಷ್ಟವನ್ನನುಭವಿಸಿದೆ .

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್‌'ಟಿ, ಹೊಟೇಲ್ ಉದ್ಯಮಕ್ಕೆ ಭಾರೀ ಪೆಟ್ಟು ನೀಡಿದೆ. ಜಿಎಸ್‌ಟಿ ಜಾರಿಗೆ ಬಂದು 9 ದಿನಗಳು ಕಳೆದರೂ, ಹೊಟೇಲ್ ಮಾಲೀಕರು ಮಾತ್ರ ಚೇತರಿಸಿಕೊಂಡಿಲ್ಲ. ಹೊಟೇಲ್ ನ ಊಟ, ತಿಂಡಿ ದರ ದುಪ್ಪಟಾಗಿರುವ ಹಿನ್ನೆಲೆಯಲ್ಲಿ ಗ್ರಾಹಕರು ಹೊಟೇಲ್ ಗೆ ತೆರಳಲು ಹಿಂದೇಟು ಹಾಕ್ತಿದ್ದಾರೆ. ಹೀಗಾಗಿ ಹೊಟೇಲ್ ವ್ಯಾಪಾರ ಫುಲ್ ಡಲ್ ಆಗಿದ್ದು, ಶೇಕಡಾ 20 ರಷ್ಟು ನಷ್ಟವಾಗಿದೆ.

ವಾರ್ಷಿಕ 75ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸುವ ಹೋಟೆಲ್ ಗಳಿಗೆ ಶೇಕಡಾ 12 ರಷ್ಟು ಮತ್ತು ಎಸಿ ಹಾಗೂ ಐಷಾರಾಮಿ ಹೋಟೆಲ್ ಗಳಿಗೆ ಶೇಕಡಾ 18 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ 40 ರೂಪಾಯಿ ಊಟ 50 ರೂಪಾಯಿಗೇರಿದೆ. ಹೀಗಾಗಿ ಗ್ರಾಹಕರು ಹೊಟೇಲ್‌'ಗಳಿಗೆ ತೆರಳದೇ ಪುಟ್ಪಾತ್ ಹೊಟೇಲ್‌ ಗಳ ಮೊರೆ ಹೋಗ್ತಿದ್ದಾರೆ.

ಒಟ್ಟಿನಲ್ಲಿ ಜಿಎಸ್‌'ಟಿ ಜಾರಿಯಿಂದ ಹೊಟೇಲ್ ಬ್ಯುಸಿನೆಸ್ ಫುಲ್ ಡಲ್ ಆಗಿದೆ. ಹೀಗಾಗಿ ಜಿಎಸ್‌'ಟಿಗೆ ತಿದ್ದುಪಡಿ ತಂದು ತೆರಿಗೆ ದರ ಹಿಂಪಡೆಯಬೇಕೆಂಬುದು ಹೊಟೇಲ್ ಮಾಲೀಕರ ಆಗ್ರಹವಾಗಿದೆ.

 

Follow Us:
Download App:
  • android
  • ios