ಶಿವಮೊಗ್ಗ(ಸೆ.11): ಹಣದಾಸೆ ತೋರಿಸಿ ಬಡ ಹಾಸ್ಟೆಲ್​ ವಿದ್ಯಾರ್ಥಿನಿಯರ ಜೀವನ ಜೊತೆ ಚೆಲ್ಲಾಟವಾಡ್ತಿದ್ದ ಹಾಸ್ಟಲ್ ವಾರ್ಡನ್ ಪೊಲೀಸರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ.

ಹಾಸ್ಟೆಲ್ ಒಂದರಲ್ಲಿ ವಾರ್ಡ್​ನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಪವಿತ್ರಾನಂದ ರಾಜ ಸದ್ಯ ಪೊಲೀಸರ ಅತಿಥಿಯಾಗಿದ್ದಾನೆ. ಈತ ಹಣದಾಸೆ ತೋರಿಸಿ ಮಗಳ ವಯಸ್ಸಿನ ವಿದ್ಯಾರ್ಥಿನಿಯರನ್ನು ಬಲವಂತವಾಗಿ ತನ್ನ ಕಾಮದಾಹಕ್ಕೆ ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ. 

ನಿನ್ನೆ ಕೂಡ ಚಕ್ಕಂದವಾಡಲು ನಗರದ ಹೋಟೆಲ್ ವೊಂದರಲ್ಲಿ ರೂಮ್ ಬುಕ್ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ಯುವತಿಯನ್ನು ಹೊಟೇಲ್‌ಗೆ ಕರೆದೊಯ್ಯುವಾಗ ಅನುಮಾನಗೊಂಡ ಸ್ಥಳೀಯರು ಪೋಲಿಸರಿಗೆ ಸುದ್ದಿ ಮುಟ್ಟಿಸಿದ್ದಾರೆ.

ಬಳಿಕ ಶಿವಮೊಗ್ಗದ ಓಬವ್ವ ಪಡೆಯ ಮುಖ್ಯಸ್ಥೆ ಮತ್ತು ಮಹಿಳಾ ಠಾಣೆ ಪಿಎಸ್ ಐ ಅನಿತಾ ತಕ್ಷಣವೇ ಹೋಟೆಲ್ ಮೇಲೆ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.