ಕಳೆದ ಸೋಮವಾರ ಬೀದರ್ ಬಿಮ್ಸ್​'ನಲ್ಲಿ ರೋಗಿಗೆ ವ್ಹೀಲ್ ಚೇರ್ ನೀಡದೇ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದರ ಬಗ್ಗೆ ಸುವರ್ಣ ನ್ಯೂಸ್ ವರದಿ ಮಾಡಿತ್ತು. ನಮ್ಮ ವರದಿ ಇಂಪ್ಯಾಕ್ಟ್ ಆಗಿದೆ. ಸಿಸಿಟಿವಿ ಪರಿಶೀಲಿಸಿದಾಗ ಸಿಬ್ಬಂದಿ ನಿರ್ಲಕ್ಷ್ಯ ಸಾಬೀತಾಗಿದ್ದು  ತನಿಖೆಗೆ ಆದೇಶಿಸಲಾಗಿದೆ.

ಬೀದರ್(ಅ.28): ಕಳೆದ ಸೋಮವಾರ ಬೀದರ್ ಬಿಮ್ಸ್​'ನಲ್ಲಿ ರೋಗಿಗೆ ವ್ಹೀಲ್ ಚೇರ್ ನೀಡದೇ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದರ ಬಗ್ಗೆ ಸುವರ್ಣ ನ್ಯೂಸ್ ವರದಿ ಮಾಡಿತ್ತು. ನಮ್ಮ ವರದಿ ಇಂಪ್ಯಾಕ್ಟ್ ಆಗಿದೆ. ಸಿಸಿಟಿವಿ ಪರಿಶೀಲಿಸಿದಾಗ ಸಿಬ್ಬಂದಿ ನಿರ್ಲಕ್ಷ್ಯ ಸಾಬೀತಾಗಿದ್ದು ತನಿಖೆಗೆ ಆದೇಶಿಸಲಾಗಿದೆ.

ಭಾಲ್ಕಿ ತಾಲೂಕಿನ ಉಚ್ಚಾ ಗ್ರಾಮದ ಕೈಲಾಶ್​ ತನ್ನ ತಾತ ಸಂಗಪ್ಪ ಎಂಬ ವೃದ್ಧನನ್ನು ಆಸ್ಪತ್ರೆಗೆ ಕರೆತಂದಿದ್ರು. ಕಣ್ಣು ಕಾಣದ, ನಡೆಯಲು ಆಗದ ವೃದ್ಧನ ಕರೆದೊಯ್ಯಲು ವ್ಹೀಲ್ ಚೇರ್ ಕೇಳಿದ್ದರೆ ಸಿಬ್ಬಂದಿ ಕೊಟ್ಟಿರಲಿಲ್ಲ. ಆಗ ಬೇರೆ ವಿಧಿಯಿಲ್ಲದೇ ಕೈಲಾಶ್ ತಾತನನ್ನು ಎತ್ತಿಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದರು. ಈ ಬಗ್ಗೆ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡುತ್ತಲೇ ಬೀದರ್​ ಜಿಲ್ಲಾಡಳಿತ ತನಿಖೆಗೆ ಆದೇಶ ಮಾಡಿತ್ತು.

ಪ್ರಕರಣದ ತನಿಖೆ ಮಾಡಿದ ತನಿಖಾಧಿಕಾರಿಗಳು ಸಿಸಿಟಿವಿಯಿಂದ ಆಸ್ಪತ್ರೆಯ ಸಿಬ್ಬಂದಿಯ ನಿರ್ಲಕ್ಷ್ಯ ಕಂಡು ಬಂದಿದೆ. ಕೂಡಲೇ ಆಸ್ಪತ್ರೆಯ ಸಿಬ್ಬಂದಿ ವಿರುದ್ಧ ಕ್ರಮಕೈಗೊಳ್ಳುವಂತೆ ಡಿಸಿ ಸೂಚನೆ ನೀಡಿದ್ದಾರೆ.