ಈವರೆಗೆ 11 ಮಂದಿಯನ್ನು ಬಂಧಿಸಲಾಗಿದ್ದು,  16 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಅಂತಾ ಹೇಳಿದ್ದಾರೆ. ಪ್ರಕರಣದಲ್ಲಿ ಇನ್ನೂ 2 ಮಕ್ಕಳನ್ನು ರಕ್ಷಣೆ ಮಾಡುವ ಅಗತ್ಯಯಿದ್ದು, ಕಿಂಗ್​ಪಿನ್​ ಉಷಾ ಸಹೋದರಿ ಸಿರಿನ್​ ಯುಎಸ್​ಎ’ನಲ್ಲಿ ಒಂದು ಮಗುವನ್ನು ಇಟ್ಟುಕೊಂಡಿದ್ದು, ಮತ್ತೊಂದು ಮಗು ಮೈಸೂರಿನಲ್ಲಿ ಉಳಿದುಕೊಂಡಿದೆ.

ಮೈಸೂರು (ಡಿ.01): ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಮೈಸೂರು ಮಕ್ಕಳ ಮಾರಾಟ ಪ್ರಕರಣದ ಕೇಂದ್ರಬಿಂದುವಾಗಿದ್ದ ನಸೀಮಾ ಆಸ್ಪತ್ರೆಗೆ ಮೈಸೂರು ಪೊಲೀಸರು ಬೀಗಮುದ್ರೆ ಹಾಕಿದ್ದಾರೆ.

ಇನ್ನೂ ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಂದು ಅರವಿಂದ ಆಸ್ಪತ್ರೆಗೆ ಕೂಡ ನೋಟಿಸ್​ ನೀಡಿಲಾಗಿದೆ ಎಂದು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಚೆನ್ನಣ್ಣನವರ್ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಈವರೆಗೆ 11 ಮಂದಿಯನ್ನು ಬಂಧಿಸಲಾಗಿದ್ದು, 16 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ ಅಂತಾ ಹೇಳಿದ್ದಾರೆ. ಪ್ರಕರಣದಲ್ಲಿ ಇನ್ನೂ 2 ಮಕ್ಕಳನ್ನು ರಕ್ಷಣೆ ಮಾಡುವ ಅಗತ್ಯಯಿದ್ದು, ಕಿಂಗ್​ಪಿನ್​ ಉಷಾ ಸಹೋದರಿ ಸಿರಿನ್​ ಯುಎಸ್​ಎ’ನಲ್ಲಿ ಒಂದು ಮಗುವನ್ನು ಇಟ್ಟುಕೊಂಡಿದ್ದು, ಮತ್ತೊಂದು ಮಗು ಮೈಸೂರಿನಲ್ಲಿ ಉಳಿದುಕೊಂಡಿದೆ.

ಈ ಎರಡೂ ಮಕ್ಕಳನ್ನು ಆದಷ್ಟು ಬೇಗ ತರಿಸಲಾಗುವುದು ಎಂದರು. ಮಕ್ಕಳ ಮಾರಾಟ ಜಾಲದ ಬಗ್ಗೆ ಸುವರ್ಣನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು.