ಉತ್ತರ ಪ್ರದೇಶದ ಗೋಂಡಾದಲ್ಲಿ ಮದುವೆ ದಿಬ್ಬಣ ಸಾಗುತ್ತಿದ್ದ ವೇಳೆ ಮದುಮಗ ಕುಳಿತಿದ್ದ ಕುದುರೆ ಹೆದರಿ ತೆರೆದ ಬಾವಿಗೆ ಹಾರಿದ ಘಟನೆ ನಡೆದಿದೆ.ದಿಬ್ಬಣ ಸಾಗುವ ವೇಳೆ ಪಟಾಕಿ ಸಿಡಿಸಿದರಿಂದ ಕಂಗಾಲಾದ ಕುದುರೆ ದಿಕ್ಕಾಪಾಲಾಗಿ ಓಡಿ ಮದುಮಗನ ಸಮೇತ ಬಾವಿಗೆ ಬಿದ್ದಿದೆ. ಕೂಡಲೇ ಸ್ಥಳದಲ್ಲಿದ್ದವರು ಜೆಸಿಬಿ ಯಂತ್ರ ತರಿಸಿ ಕುದುರೆ ಮತ್ತು ಮದುಮಗನನ್ನು ಮೇಲಕ್ಕೆತ್ತಿದ್ದಾರೆ.ಅದೃಷ್ಟವಷಾತ್‌ ಮದುಮಗ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದು, ಕುದುರೆಯೂ ಪ್ರಾಣಾಪಾಯದಿಂದ ಪಾರಾಗಿದೆ.(ಸಾಂದರ್ಭಿಕ ಚಿತ್ರ)

