ರಸ್ತೆ ನಿಯಮಗಳನ್ನು ಮೀರಿದರೆ ಏನೆಲ್ಲಾ ಆನಾಹುತ ಆಗುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ರಸ್ತೆ ದಾಟುವ ವೇಳೆ ವೇಗವಾಗಿ ಬಂದ ಆಟೋ ರಿಕ್ಷಾ ಕೂಲಿ ಕಾರ್ಮಿಕನ ಮೇಲೆ ಎರಗಿದ ಪರಿಣಾಮಾವಾಗಿ ಮೃತ ಪಟ್ಟ ಘಟನೆ ಹೈದರಾಬಾದ್ ನಗರದ ಪಾತ ಬಸ್ತಿ ರೈಲ್ವೆ ನಿಲ್ದಾಣ ಸಮೀಪದ ಶಂಷಿರಗಂ ಸರ್ಕಲ್ ನಲ್ಲಿ ನಡೆದಿದೆ.
ಹೈದರಾಬಾದ್(ಜ.23): ರಸ್ತೆ ನಿಯಮಗಳನ್ನು ಮೀರಿದರೆ ಏನೆಲ್ಲಾ ಆನಾಹುತ ಆಗುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ರಸ್ತೆ ದಾಟುವ ವೇಳೆ ವೇಗವಾಗಿ ಬಂದ ಆಟೋ ರಿಕ್ಷಾ ಕೂಲಿ ಕಾರ್ಮಿಕನ ಮೇಲೆ ಎರಗಿದ ಪರಿಣಾಮಾವಾಗಿ ಮೃತ ಪಟ್ಟ ಘಟನೆ ಹೈದರಾಬಾದ್ ನಗರದ ಪಾತ ಬಸ್ತಿ ರೈಲ್ವೆ ನಿಲ್ದಾಣ ಸಮೀಪದ ಶಂಷಿರಗಂ ಸರ್ಕಲ್ ನಲ್ಲಿ ನಡೆದಿದೆ.
ಮೃತ ಕೂಲಿ ಕಾರ್ಮಿಕ ವೆಂಕಟಾಪುರದ 50 ವರ್ಷದ ಜಂಗಯ್ಯ ಎಂದು ತಿಳಿದು ಬಂದಿದೆ. ಅಲ್ಲದೆ ಆಟೋ ರಿಕ್ಷಾ ಡಿಕ್ಕಿ ರಭಸಕ್ಕೆ ಆಟೋ ಚಕ್ರವೇ ಉದರಿ ಹೋಗಿದೆ. ಈ ಭಯಾನಕ ದೃಶ್ಯವನ್ನು ಕಂಡ ಸ್ಥಳೀಯರು ಕಕ್ಕಾಬಿಕ್ಕಿಯಾಗಿದ್ದು, ಆಟೋ ಚಾಲಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
