ಧನಸ್ಸು ರಾಶಿಯವರಿಗೆ ಇಂದು ಶುಭ ದಿನ; ಉಳಿದ ರಾಶಿಯವರ ಜಾತಕಫಲ ಹೇಗಿದೆ ಗೊತ್ತಾ?
ಮೇಷ: ನೀವು ನಂಬಿದ ಗುರುಗಳ ಭೇಟಿ, ಹೊಸ ಆಲೋಚನೆಯೊಂದಿಗೆ ಪ್ರಯಾಣ, ಪಾದಗಳ ನೋವು ಕಾಡಲಿದೆ, ನರಸಿಂಹ ಮಂತ್ರ ಪಠಿಸಿ.
ವೃಷಭ: ಉದರ ಪೋಷಣೆಗೆ ಹೊಸ ಅವಕಾಶ, ನಿಮ್ಮ ಕೆಲಸದಲ್ಲಿ ಶ್ಲಾಘನೆ, ಸ್ವಲ್ಪದರಲ್ಲೇ ಅಪಾಯದಿಂದ ಪಾರು, ಮಂತ್ರಾಲಯ ಪ್ರಭುಗಳ ದರ್ಶನ ಮಾಡಿ.
ಮಿಥುನ: ನಿಮ್ಮದಲ್ಲದ ತಪ್ಪಿಗೆ ಹೊಣೆಯಾಗಬೇಕಾಗುವುದು, ಹೆಜ್ಜೆ ಇಡುವ ಮುನ್ನ 10 ಸಲ ಯೋಚಿಸಿ, ನಂಬಿಕೆ ಕಳೆದುಕೊಳ್ಳಬೇಡಿ, ಪಂಡರಾಪುರ "ಠಲ ಸ್ಮರಣೆ ಮಾಡಿ
ಕಟಕ: ಹತ್ತಿ ವ್ಯಾಪಾರಿಗಳಿಗೆ ಶುಭ ದಿನ, ವಸ್ತ್ರ ತಯಾರಕರಿಗೂ ಲಾಭ, ಕಾಳಹಸ್ತಿ ದರ್ಶನದಿಂದ ಕಷ್ಟ ನಿವಾರಣೆ
ಸಿಂಹ: ಧನಿಕರಿಗೆ ಪೆಟ್ಟು, ಔಷಧಿ ವ್ಯಾಪಾರಿಗಳಿಗೆ ಕಡಿಮೆ ಲಾಭ, ತರಕಾರಿ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ, ಧಾನ್ಯ ದಾನ ಮಾಡಿ
ಕನ್ಯಾ: ವಿದ್ಯಾರ್ಥಿಗಳಲ್ಲಿ ಆತಂಕ, ಮನೋಕಾಮನೆಗಳು ಈಡೇರುತ್ತವೆ, ಹೆಚ್ಚು ಚಿಂತಿಸಬೇಡಿ, ಸತ್ಯನಾರಾಯಣ ಸ್ವಾಮಿ ಪೂಜೆ ಮಾಡಿ
ತುಲಾ: ಪ್ರಯಾಣದಿಂದ ಆಯಾಸ, ಹೋಟೆಲ್ ವ್ಯಾಪಾರಿಗಳಿಗೆ ಲಾಭದ ದಿನ, ಆರೋಗ್ಯ ವ್ಯತ್ಯಯ, ಭವಾನಿಶಂಕರ ಸ್ಮರಣೆ ಮಾಡಿ
ವೃಶ್ಚಿಕ: ಸ್ತ್ರೀಯರಿಗೆ ಮನೋವ್ಯಾಕುಲ, ಮಾಡಿದ ತಪ್ಪಿಗೆ ಶಿಕ್ಷೆಯಾಗಲಿದೆ, ಹೊಸ ತೀರ್ಮಾನ ತೆಗೆದುಕೊಳ್ಳಬೇಡಿ, ಸಾಧ್ಯವಾದರೆ ಅಷ್ಟ ದ್ರವ್ಯ ಹೋಮ ಮಾಡಿಸಿ
ಧನಸ್ಸು: ಗ್ರಂಥಪಾಲಕರಿಗೆ ನೆಮ್ಮದಿಯ ದಿನ, ಮೇಲಧಿಕಾರಿಗಳ ಕಿರಿಕಿರಿ ತಪ್ಪಲಿದೆ, ಶ್ರಮದ ಕೆಲಸ, ರಂಗನಾಥ ಸ್ವಾಮಿಯ ದರ್ಶನ ಮಾಡಿ
ಮಕರ: ಸಭೆಯಲ್ಲಿ ಪಾಲ್ಗೊಳ್ಳುತ್ತೀರಿ. ಸೌಂದರ್ಯ ವರ್ಧಕಗಳ ಖರೀದಿ, ಪ್ರೇಯಕರರೊಂದಿಗೆ ಸುತ್ತಾಟ, ಮೀನಾಕ್ಷಿ ದರ್ಶನ ಮಾಡ
ಕುಂಭ: ದೂರದ ಊರಿಂದ ಸಂದೇಶ ಬರಲಿದೆ. ಲೆಕ್ಕಪತ್ರಗಳು ಕಳೆದುಹೋಗುವ ಸಂಭವ. ಯೋಗ ಸಾಧನೆ ಮಾಡುವ ಮನಸ್ಸು, ರಾಮಯಣ ಪ್ರವಚನ ಕೇಳುವುದರಿಂದ ಮನ:ಶಾಂತಿ ಸಿಗಲಿದೆ.
ಮೀನ: ಹಾಲು ವ್ಯಾಪಾರಿಗಳಿಗೆ ಉತ್ತಮ ದಿನ, ಗೋವು ರಕ್ಷಕರಿಗೂ ಉತ್ತಮ ದಿನ, ಆಯುರ‌್ವೇದ ಉತ್ಪಾದಕರಿಗೆ ಹೊಸ ಆಲೋಚನೆ, ಈಶ್ವರ ದರ್ಶನ ಸಮಾಧಾನ ಕೊಡಲಿದೆ.
