ಅವರಿಬ್ಬರು ಮಾಜಿ ಕಾರ್ಪೊರೇಟರೊಬ್ಬರ ಎನ್'ಜಿಒದಲ್ಲಿ ಕೆಲಸಕ್ಕಿದ್ದವರು. ಬರುವ ಸಂಬಳ ಸಾಲದು ಅಂತ ಹಣ ಸಂಪಾದನೆಗೆ ಹನಿಟ್ರ್ಯಾಪ್ ದಾರಿ ಹಿಡಿದಿದ್ದರು. ಹುಡುಗಿಯರನ್ನು ಬಿಟ್ಟು ಯಾಮಾರಿಸಿ ದುಡ್ಡು ಮಾಡುತ್ತಿದ್ದ ಆಸಾಮಿಗಳು ಈಗ ಪೊಲೀಸರ ಅಥಿತಿಯಾಗಿದ್ದಾರೆ.
ಬೆಂಗಳೂರು(ಜ.13): ಅವರಿಬ್ಬರು ಮಾಜಿ ಕಾರ್ಪೊರೇಟರೊಬ್ಬರ ಎನ್'ಜಿಒದಲ್ಲಿ ಕೆಲಸಕ್ಕಿದ್ದವರು. ಬರುವ ಸಂಬಳ ಸಾಲದು ಅಂತ ಹಣ ಸಂಪಾದನೆಗೆ ಹನಿಟ್ರ್ಯಾಪ್ ದಾರಿ ಹಿಡಿದಿದ್ದರು. ಹುಡುಗಿಯರನ್ನು ಬಿಟ್ಟು ಯಾಮಾರಿಸಿ ದುಡ್ಡು ಮಾಡುತ್ತಿದ್ದ ಆಸಾಮಿಗಳು ಈಗ ಪೊಲೀಸರ ಅಥಿತಿಯಾಗಿದ್ದಾರೆ.
ಮಾಜಿ ಕಾರ್ಪೊರೇಟರ್ ಕಚೇರಿ ಸಿಬ್ಬಂದಿ ಪೊಲೀಸರ ಬಲೆಗೆ
ಈ ಫೋಟೋದಲ್ಲಿ ಫೋಸ್ ಕೊಡ್ತಿರೋ ಇವರೇ ಹನಿಟ್ರ್ಯಾಪ್ ಕಿಂಗ್'ಪಿನ್'ಗಳು ಹೆಸರು ಆನಂದ್ ಆಚಾರ್ ಮತ್ತು ರವಿಕುಮಾರ್. ಇವರಿಬ್ಬರು ವಿಜಯನಗರದ ಮಾರೇನಹಳ್ಳಿಯ ಮಾಜಿ ಕಾರ್ಪೊರೇಟ್ ವಾಗೀಶ್ ಕಚೇರಿಯ ಸಿಬ್ಬಂದಿ. ಸದ್ಯ ಪೊಲೀಸರ ಅಥಿತಿಗಳು.
ಸಾಫ್ಟ್ವೇರ್ ಇಂಜೀನಿಯರ್ನಿಂದ ಬಯಲಾಯ್ತು ಹನಿಟ್ರ್ಯಾಪ್ ಜಾಲ ಪತ್ತೆಯಾಗಿದ್ದು ಹೇಗೆ?
ಆಸಾಮಿಗಳು ಬಲೆಗೆ ಬಿದ್ದಿದ್ದು ಹೇಗೆ?
ಇನ್ನೂ ಇವರ ಬಿಸಿನೆಸ್ ಸೆಂಟರ್ ವಿಜಯನಗರ. ಲೊಕ್ಯಾಂಟೋ ವೆಬ್ಸೈಟ್ ಮೂಲಕ ವ್ಯವಹಾರ ನಡೆಸುತ್ತಿದ್ರು. ಆನ್ ಲೈನ್ನಲ್ಲೇ ಗಿರಾಕಿಗಳನ್ನು ಕುದುರಿಸ್ತಾ ಇದ್ರು. ಗಿರಾಕಿಗಳು ಬಂದ ಕೂಡ್ಲೇ ಮೂವರು ಯುವತಿಯರನ್ನು ಬಿಟ್ಟು ಡೀಲ್ ನಡೆಸುತ್ತಿದ್ರು.ಈ ಗ್ಯಾಂಗ್ ಸಾಫ್ಟವೇರ್ ಎಂಜಿನಿಯರ್ ಒಬ್ಬರನ್ನು ಕರೆಸಿ ಹತ್ತು ಸಾವಿರ ಹಣವನ್ನು ದೋಚಿದ್ದಾರೆ. ಇದ್ರಿಂದ ಬೆದರಿದ ಎಂಜಿನಿಯರ್ ನಗರ ಪೊಲೀಸ್ ಆಯುಕ್ತರಿಗೆ ಇ ಮೇಲ್ ನ ಮೂಲಕ ದೂರನ್ನ ನೀಡಿದಾಗ ಜಾಲ ಬಯಲಿಗೆ ಬಂದಿದೆ.
ವಿಜಯನಗರ ಪೊಲೀಸರು ಹನಿಟ್ರ್ಯಾಪ್ ಜಾಲವನ್ನು ಭೇದಿಸಿ ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಸದ್ಯ ಯುವತಿಯರ ಬಂಧನಕ್ಕೆ ಬಲೆ ಬೀಸಿದ್ದು ತನಿಖೆ ಚುರುಕುಗೊಳಿಸಿದ್ದಾರೆ.
