ಅತ್ಯಾಚಾರ ಆರೋಪದಡಿಯಲ್ಲಿ ಜೈಲು ಸೇರಿರುವ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್ ಸಿಂಗ್  ನೀಡಿರುವ 10 ಜನ ಸಂದರ್ಶಕರ ಪಟ್ಟಿಯಲ್ಲಿ ಅವರ ಪತ್ನಿ ಹರ್ಜೀತ್ ಕೌರ್ ಹೆಸರೇ ಇಲ್ಲ!

ಚಂಡೀಗಡ್ (ಸೆ. 05): ಅತ್ಯಾಚಾರ ಆರೋಪದಡಿಯಲ್ಲಿ ಜೈಲು ಸೇರಿರುವ ಡೇರಾ ಸಚ್ಚಾ ಸೌಧ ಮುಖ್ಯಸ್ಥ ಗುರ್ಮೀತ್ ಸಿಂಗ್ ನೀಡಿರುವ 10 ಜನ ಸಂದರ್ಶಕರ ಪಟ್ಟಿಯಲ್ಲಿ ಅವರ ಪತ್ನಿ ಹರ್ಜೀತ್ ಕೌರ್ ಹೆಸರೇ ಇಲ್ಲ!

ಕೈದಿಯನ್ನು ಭೇಟಿಯಾಗಲು ಬರುವ ಸಂದರ್ಶಕರನ್ನು ಸುಲಭವಾಗಿ ಗುರುತಿಸಲು, ಕೈದಿಯೊಂದಿಗೆ ಮಾತನಾಡಲು ಅವಕಾಶ ಕೊಡಲು ಹೆಚ್ಚಾಗಿ ಕುಟುಂಬದವರಿಗೆ ಆದ್ಯತೆ ಕೊಡಲಾಗುತ್ತದೆ. ಅಚ್ಚರಿ ಎಂಬಂತೆ ಗುರ್ಮೀತ್ ಸಿಂಗ್ ಸಂದರ್ಶಕರ ಪಟ್ಟಿಯಲ್ಲಿ ಅವರ ಪತ್ನಿ ಹರ್ಜೀತ್ ಕೌರ್ ಹೆಸರೇ ಇಲ್ಲ.

ಗುರ್ಮೀತ್ ಸಿಂಗ್ ನೀಡಿದ 10 ಜನ ಸಂದರ್ಶಕರ ಪಟ್ಟಿಯಲ್ಲಿ ತಾಯಿ ನಸೀಬ್ ಕೌರ್, ಮಗ ಜಾಸ್ಮಿತ್ ಇನ್ಸಾನ್, ಸೊಸೆ ಹುಸನ್’ಪ್ರೀತ್ ಇನ್ಸಾನ್, ಮಕ್ಕಳಾದ ಅಮರ್’ಪ್ರೀತ್ ಮತ್ತು ಚರಣ್’ಪ್ರೀತ್, ಅಳಿಯಂದಿರಾದ ಶಾನ್-ಇ-ಮೀತ್ ಮತ್ತು ರುಹ್-ಇ-ಮೀತ್, ಡೇರಾ ಮುಖ್ಯಸ್ಥ ವಿಪಾಸನಾ ಮತ್ತು ಧಾನ್ ಸಿಂಗ್ ಹೆಸರು ಮಾತ್ರ ಇದೆ. ಪತ್ನಿ ಹರ್ಜೀತ್ ಕೌರ್ ಭೇಟಿ ಮಾಡಲು ಇವರಿಗೆ ಇಷ್ಟವಿಲ್ಲ ಎನ್ನಲಾಗಿದೆ. ಆದರೆ ಇವರ್ಯಾರು ಸದ್ಯಕ್ಕೆ ಭೇಟಿ ಮಾಡಲು ಲಭ್ಯವಿಲ್ಲದಿದ್ದು, ಇಡೀ ಕುಟುಂಬ ಸಿರ್ಸಾಯಿಂದ ಸ್ಥಳಾಂತರಗೊಂಡಿದೆ.