Asianet Suvarna News Asianet Suvarna News

ಅರಣ್ಯದಲ್ಲಿ ಹನಿ​ಟ್ರ್ಯಾ​ಪ್‌, ಖೆಡ್ಡಾಕ್ಕೆ ಬಿದ್ದ ಪುಂಡಾನೆ

ಪುಂಡ ಒಂಟಿ​ಸ​ಲ​ಗ​ವನ್ನು ಹನಿ​ಟ್ರ್ಯಾಪ್‌ ಮೂಲಕ ಖೆಡ್ಡಾಗೆ ಬೀಳಿ​ಸು​ವಲ್ಲಿ ಅರಣ್ಯ ಇಲಾಖೆ ನೇತೃ​ತ್ವ​ದ ಗಜ​ಪ​ಡೆ ಕಡೆಗೂ ಯಶ​ಸ್ವಿ​ಯಾ​ಗಿದೆ. ಕಳೆದ 2 ವರ್ಷ​ಗ​ಳಿಂದಲೂ ಚನ್ನ​ಗಿರಿ, ಭದ್ರಾ​ವತಿ, ಕುಕ್ಕ​ವಾಡ ಅರಣ್ಯ ಪ್ರದೇ​ಶ​ದಂಚಿನ ಗ್ರಾಮಗಳು ಹಾಗೂ ಚನ್ನ​ಗಿ​ರಿ ತೋಟಕ್ಕೆ ನುಗ್ಗಿ ಬೆಳೆ​ಗ​ಳನ್ನು ಹಾಳು​ ಮಾಡುತ್ತಿದ್ದ ಪುಂಡಾನೆ ಮಂಗಳವಾರ ಜೋಡಿ ಹೆಣ್ಣಾ​ನೆ​ಗಳ ಧ್ವನಿ ಕೇಳಿ ಬಂದು, ತಾನಾ​ಗಿಯೇ ಖೆಡ್ಡಾಕ್ಕೆ ಬಿದ್ದಿದೆ.

Honey Trap In Davanagere Forest Wild Elephant captured
Author
Bengaluru, First Published Dec 26, 2018, 10:08 AM IST

ದಾವ​ಣ​ಗೆರೆ: ಅರ​ಣ್ಯ​ದಂಚಿನ ಗ್ರಾಮ​ಸ್ಥರು, ರೈತರ ನಿದ್ದೆ​ಗೆ​ಡಿ​ಸಿದ್ದ ಪುಂಡ ಒಂಟಿ​ಸ​ಲ​ಗ​ವನ್ನು ಹನಿ​ಟ್ರ್ಯಾಪ್‌ ಮೂಲಕ ಖೆಡ್ಡಾಗೆ ಬೀಳಿ​ಸು​ವಲ್ಲಿ ಅರಣ್ಯ ಇಲಾಖೆ ನೇತೃ​ತ್ವ​ದ ಗಜ​ಪ​ಡೆ ಕಡೆಗೂ ಯಶ​ಸ್ವಿ​ಯಾ​ಗಿದೆ. ಕಳೆದ 2 ವರ್ಷ​ಗ​ಳಿಂದಲೂ ಚನ್ನ​ಗಿರಿ, ಭದ್ರಾ​ವತಿ, ಕುಕ್ಕ​ವಾಡ ಅರಣ್ಯ ಪ್ರದೇ​ಶ​ದಂಚಿನ ಗ್ರಾಮಗಳು ಹಾಗೂ ಚನ್ನ​ಗಿ​ರಿ ತೋಟಕ್ಕೆ ನುಗ್ಗಿ ಬೆಳೆ​ಗ​ಳನ್ನು ಹಾಳು​ ಮಾಡುತ್ತಿದ್ದ ಪುಂಡಾನೆ ಮಂಗಳವಾರ ಜೋಡಿ ಹೆಣ್ಣಾ​ನೆ​ಗಳ ಧ್ವನಿ ಕೇಳಿ ಬಂದು, ತಾನಾ​ಗಿಯೇ ಖೆಡ್ಡಾಕ್ಕೆ ಬಿದ್ದಿದೆ.

ಚನ್ನ​ಗಿರಿ ವಲಯ ಅರಣ್ಯ ಪ್ರದೇ​ಶ ದುರ್ಗದ ಬಸಾ​ಪುರ ಬಳಿ ಅರಣ್ಯ ಪ್ರದೇ​ಶ​ದಲ್ಲಿ ಪುಂಡ ಒಂಟಿ ಸಲ​ಗ ಅಭಿ​ಮನ್ಯು ನೇತೃ​ತ್ವದ 5 ಗಂಡಾ​ನೆ​ಗ​ಳಿಗೆ ಸೆರೆ​ಯಾ​ದರೆ, ಈ ಗಜ​ಪೆ​ಡೆಗೆ ಸಕ್ರೆ​ಬೈಲು ಆನೆ ಬಿಡಾ​ರ​ದಿಂದ ಬಂದಿದ್ದ ಗಂಗೆ, ದೀಪಾ ಧ್ವನಿಗೆ ಒಂಟಿ ಸಲಗ ಮಾರು ಹೋಗಿ ಬಿಟ್ಟಿತು.

ಗಣ​ಗನ ಅಂಕ​ಲಿನ ಆನೆ ಬಿಡಾ​ರ​ದಿಂದ ಎರ​ಡನೇ ದಿನದ ಕಾರ್ಯಾ​ಚ​ರಣೆ ಮಂಗ​ಳ​ವಾರ ಬೆಳಗ್ಗೆ ಅಭಿ​ಮನ್ಯು ಸಾರ​ಥ್ಯ​ದಲ್ಲಿ 5 ಗಂಡಾ​ನೆ​ಗ​ಳೊಂದಿಗೆ ಆರಂಭ​ವಾ​ಯಿತು. ವಯಸ್ಕ ಪುಂಡ ಒಂಟಿ ಸಲ​ಗ​ವನ್ನು ಸೆಳೆಯಲು ಸಕ್ರೆ​ಬೈ​ಲಿ​ನಿಂದ ಬಂದಿದ್ದ ಗಂಗೆ, ದೀಪಾ ಹೆಣ್ಣಾ​ನೆ​ಗಳು ಘೀಳಿ​ಡುತ್ತಾ ಗಂಡಾ​ನೆ​ಗಳ ಪಡೆ​ಯೊಂದಿಗೆ ಸಾಗು​ತ್ತಿ​ದ್ದವು. ಹೆಣ್ಣಾ​ನೆ​ಗಳ ಧ್ವನಿಗೆ ಮಾರು ಹೋದ ಪುಂಡ ಸಲಗ ಹೆಣ್ಣಾ​ನೆ​ಗ​ಳನ್ನ ಹುಡು​ಕಿ​ಕೊಂಡು ಜೋರಾಗಿ ಘೀಳಿ​ಡುತ್ತಾ ಧಾವಿ​ಸಿತು.

ಅರ​ಣ್ಯಾ​ಧಿ​ಕಾ​ರಿ​ಗಳ ಯೋಜ​ನೆ​ಯಂತೆ ಹೆಣ್ಣಾ​ನೆ​ಗಳ ಧ್ವನಿಗೆ ಮಾರು ಹೋಗಿ ಬಂದ ಒಂಟಿ ಸಲ​ಗ​ವನ್ನು ಕಂಡ ತಂಡ ಒಂದು ಕ್ಷಣ ಹೌಹಾ​ರು​ವಂತಾ​ಯಿತು. ಭರ್ಜರಿ ಗಾತ್ರದ, ದೊಡ್ಡ ದಂತ​ಗ​ಳನ್ನು ಹೊಂದಿದ್ದ ಒಂಟಿ ಸಲ​ಗ ಏಕಾ​ಏಕಿ ಅಭಿ​ಮನ್ಯು ನೇತೃ​ತ್ವದ ಗಜ​ಪಡೆ ಮೇಲೆ​ರ​ಗಲು ಮುಂದಾ​ಗಿದೆ. ತಕ್ಷ​ಣವೇ ಸ್ಥಳ​ದ​ಲ್ಲಿಯೇ ಇದ್ದ ಅರಣ್ಯ ಇಲಾ​ಖೆಯ ಅರ​ವ​ಳಿಕೆ ತಜ್ಞ ಡಾ.ಪ್ರ​ದೀಪ್‌ ಅರ​ವ​ಳಿಕೆ ಮದ್ದನ್ನು ಒಂಟಿ ಸಲ​ಗದ ಮೇಲೆ ಪ್ರಯೋ​ಗಿ​ಸಿ​ದ್ದಾರೆ. ಅರ​ವ​ಳಿಕೆ ಮದ್ದು ದೇಹ ಸೇರಿದ 10 ನಿಮಿಷಕ್ಕೂ ಹೆಚ್ಚು ಕಾಲ ಸಲ​ಗ ಕೈಗೆ ಸಿಗ​ದಂತೆ ವರ್ತಿ​ಸಿದೆ.

ಅರ​ವ​ಳಿಕೆ ಮದ್ದು ಕೆಲಸ ಮಾಡು​ತ್ತಿ​ದ್ದಂತೆಯೇ ಒಂಟಿ ಸಲ​ಗ ಅರ​ಣ್ಯ​ದ​ಲ್ಲಿದ್ದ ನೈಸ​ರ್ಗಿಕ ನಿರ್ಮಿತ ಖೆಡ್ಡಾಗೆ ಉರುಳಿ ಬಿತ್ತು. ತಕ್ಷ​ಣವೇ ಕಾರ್ಯೋ​ನ್ಮು​ಖ​ರಾದ ಮಾವು​ತರು, ಕಾವಾ​ಡಿ​ಗರು ಆಳವಾದ ಗುಂಡಿಗೆ ಇಳಿದು, ಸಲಗದ ಕಾಲು​ಗ​ಳಿಗೆ ಸರ​ಪಳಿ, ದಪ್ಪ​ನೆಯ ಹಗ್ಗ​ಗ​ಳನ್ನು ಬಿಗಿ​ದಿ​ದ್ದಾರೆ. ಸ್ವತಃ ಆರ್‌​ಎ​ಫ್‌ಓ ದಿನೇಶ ಮಾವು​ತ​ರೊಂದಿಗೆ ಗುಂಡಿಗೆ ಇಳಿದು, ಸರ​ಪಳಿ, ಹಗ್ಗ ಬಿಗಿ​ಯುವ ಕಾರ್ಯ ನೋಡಿ​ಕೊಂಡರು.

ಪುಂಡಾನೆ ಮದ್ದು ಇಳಿ​ಯ​ಲೆಂದು ಅದರ ಮೇಲೆ ಸಾಕಷ್ಟುನೀರು ಸುರಿ​ಯ​ಲಾ​ಯಿತು. ನಿಧಾ​ನ​ವಾಗಿ ಮಂಪ​ರಿ​ನಿಂದ ಹೊರ ಬರು​ತ್ತಿದ್ದ ಒಂಟಿ ಸಲಗದ ಆರ್ಭ​ಟ ಹೆಚ್ಚು​ತ್ತಲೇ ಇತ್ತು. ಅಷ್ಟ​ರ​ಲ್ಲಾ​ಗಲೇ ಅದರ ನಾಲ್ಕೂ ಕಾಲು​ಗ​ಳಿಗೆ ಸರ​ಪಳಿ, ದೊಡ್ಡ ಹಗ್ಗ​ಗ​ಳನ್ನು ಬಿಗಿದು, ಅಭಿ​ಮನ್ಯು ನೇತೃ​ತ್ವದ ಗಜಪ​ಡೆ​ಗ​ಳಿಗೆ ಕಟ್ಟಿ​ದ್ದ​ರಿಂದ ಒಂಟಿ ಸಲ​ಗದ ಕೂಗು ಕೇವಲ ಅರಣ್ಯ ರೋಧ​ನ​ವಾ​ಯಿತು. ರಸ್ತೆ​ಯಿಂದ ಸುಮಾರು 8-10 ಕಿಮೀ ಒಳಗೆ ದಟ್ಟಾ​ರ​ಣ್ಯ​ದಲ್ಲಿ ನಡೆದ ಕಾರ್ಯಾ​ಚ​ರ​ಣೆಯಲ್ಲಿ ಆನೆ ಸೆರೆ ಸಿಗು​ತ್ತಿ​ದ್ದಂತೆ ಇಡೀ ತಂಡ ಹರ್ಷೋ​ದ್ಘಾರ ಮಾಡಿತು.

ಮತ್ತಿ​ಗೋಡು ಅರಣ್ಯ ಬಿಡಾ​ರದ 2 ಗಂಡಾನೆ, ದುಬಾರೆ ಅರಣ್ಯ ಬಿಡಾ​ರ​ದಿಂದ ಬಂದಿದ್ದ 3 ಗಂಡಾ​ನೆ​ಗಳ ನೇತೃತ್ವ ವಹಿ​ಸಿದ್ದು ಅಭಿ​ಮನ್ಯು ಆನೆ. ಒಂಟಿ ಸಲ​ಗ​ವನ್ನು ಹನಿ​ಟ್ರ್ಯಾ​ಪ್‌ಗೆ ಬಳ​ಸಿ ​ಕೊ​ಳ್ಳಲು ಕರೆ​ಸಿ​ಕೊಂಡಿದ್ದ ಗಂಗೆ, ದೀಪಾ ಪಾತ್ರ​ವನ್ನೂ ಇಲ್ಲಿ ಮರೆ​ಯು​ವಂತಿಲ್ಲ. ಸದ್ಯಕ್ಕೆ ಚಿಕ್ಕ​ಮ​ಳಲಿ ಅರಣ್ಯ ಪ್ರದೇ​ಶಕ್ಕೆ ಆನೆ​ಯನ್ನು ಕಟ್ಟಿತರಲಾ​ಗಿದೆ. ಚಿಕ್ಕ​ಮ​ಳಲಿ ಸಮೀ​ಪದ ಅಳ್ಳಿ​ಬೈಲು ಅರಣ್ಯ ಪ್ರದೇ​ಶ​ದಲ್ಲಿ ದೊಡ್ಡ ಮರ​ವೊಂದಕ್ಕೆ ಸಲ​ಗ​ವನ್ನು ಕಟ್ಟಿಹಾಕಿದ್ದು, ಸಲಗ ಮಂಪ​ರಿ​ನಿಂದ ಹೊರ ಬರುವು​ದ​ರ​ಲ್ಲಿದೆ.

ಸೆರೆ ಸಿಕ್ಕ ಒಂಟಿ ಸಲ​ಗ​ವನ್ನು ಶಿವ​ಮೊಗ್ಗ ಜಿಲ್ಲೆಯ ಸಕ್ರೆ​ಬೈಲು ಆನೆ ಬಿಡಾ​ರಕ್ಕೆ ರಾತ್ರೋ​ರಾ​ತ್ರಿ​ಯೇ ಕೊಂಡೊ​ಯ್ಯಲು ಸಿದ್ಧತೆ ನಡೆ​ದಿದೆ. ಸಲ​ಗ​ವನ್ನು ಲಾರಿಗೆ ಹತ್ತಿ​ಸಲು

ಗುಂಡಿ ತೆಗೆ​ಯುವ ಕೆಲ​ಸ​ ನಡೆದಿದೆ. ರಾತ್ರಿಯೇ ಟಾಚ್‌​ರ್‍, ಮೊಬೈ​ಲ್‌​ಗಳ ಬೆಳ​ಕಿ​ನಲ್ಲಿ ಈ ಎಲ್ಲಾ ಕಾರ್ಯ​ಗಳು ಸಾಗಿವೆ. ಡಿಎ​ಫ್‌​ಓ ಚಲು​ವ​ರಾಜ, ಎಸಿ​ಎಫ್‌ ಸುಬ್ರ​ಹ್ಮಣ್ಯ, ಆರ್‌​ಎ​ಫ್‌ಓ ಎಸ್‌.​ಓ.​ದಿ​ನೇಶ, ಮಂಜು​ನಾಥ ಮಾರ್ಗ​ದ​ರ್ಶನ​ ನೀಡಿದರು. 150ಕ್ಕೂ ಹೆಚ್ಚು ​ಅ​ರಣ್ಯ ಇಲಾಖೆ ಸಿಬ್ಬಂದಿ, ಮಾವು​ತರು, ಕಾವಾ​ಡಿ​ಗರು ಕಾರ್ಯಾ​ಚ​ರಣೆಯಲ್ಲಿ ಮಹ​ತ್ವದ ಪಾತ್ರ ವಹಿ​ಸಿ​ದರು.

Follow Us:
Download App:
  • android
  • ios