ಹನಿಟ್ರಾಪ್: ದಂಪತಿಗಳ ಬಂಧನ

First Published 25, Mar 2018, 9:58 PM IST
Honey Trap in Davanagere
Highlights

ದಾವಣಗೆರೆಯಲ್ಲಿ ಹನಿಟ್ರ್ಯಾಪ್  ಪ್ರಕರಣವೊಂದು ಬೆಳಕಿಗೆ ಬಂದಿದೆ.  ಪತ್ನಿಯನ್ನು ಬಳಸಿಕೊಂಡು ಪತಿ ಹನಿ ಟ್ರ್ಯಾಪ್ ಮಾಡುತ್ತಿದ್ದ. ಬೆಳ್ಳಿ, ಬಂಗಾರ ವ್ಯಾಪಾರಿಯನ್ನ ಬಲೆಗೆ ಹಾಕಿಕೊಂಡು ಹನಿಟ್ರ್ಯಾಪ್ ಮಾಡಲು ಹೋಗಿ ದಂಪತಿಗಳಿಬ್ಬರು ಪೊಲೀಸರ ಅತಿಥಿಯಾಗಿದ್ದಾರೆ.  

ದಾವಣಗೆರೆ (ಮಾ. 25): ದಾವಣಗೆರೆಯಲ್ಲಿ ಹನಿಟ್ರ್ಯಾಪ್  ಪ್ರಕರಣವೊಂದು ಬೆಳಕಿಗೆ ಬಂದಿದೆ.  ಪತ್ನಿಯನ್ನು ಬಳಸಿಕೊಂಡು ಪತಿ ಹನಿ ಟ್ರ್ಯಾಪ್ ಮಾಡುತ್ತಿದ್ದ. ಬೆಳ್ಳಿ, ಬಂಗಾರ ವ್ಯಾಪಾರಿಯನ್ನ ಬಲೆಗೆ ಹಾಕಿಕೊಂಡು ಹನಿಟ್ರ್ಯಾಪ್ ಮಾಡಲು ಹೋಗಿ ದಂಪತಿಗಳಿಬ್ಬರು ಪೊಲೀಸರ ಅತಿಥಿಯಾಗಿದ್ದಾರೆ.  

ಬಾವೀಶ್(34) ಹನಿಟ್ರ್ಯಾಪ್'ಗೊಳಗಾದ ಚಿನ್ನದ ವ್ಯಾಪಾರಿ. ಇವರನ್ನು ಮನೆಗೆ ಕರೆಸಿಕೊಂಡು  ಪತ್ನಿ ಜೊತೆ ಭಾವೀಶ್’ನ  ವಿಡಿಯೋವನ್ನ  ಪತಿಯೇ ವಿಡಿಯೋ ಮಾಡಿ ಬ್ಲಾಕ್’ಮೇಲ್ ಮಾಡುತ್ತಿದ್ದರು.

ವೆಂಕಟೇಶ, ರೇಖಾ ಎಂಬ ದಂಪತಿ ಹನಿಟ್ರ್ಯಾಪ್ ಮಾಡಿದವರು. ಕಳೆದ 6 ತಿಂಗಳಿಂದ ಮೊಬೈಲ್ ಗೆ ಕಾಲ್ ಮಾಡಿ ಪರಿಚಯ ಮಾಡಿಕೊಂಡಿದ್ದರು.  ಬಂಗಾರ ಖರೀದಿಸಲು ಅಂಗಡಿಗೆ ಹೋದಾಗ ನಂಬರ್ ಪಡೆದಿದ್ದರು.  ಕೆಲ ತಿಂಗಳಿನಿಂದ ರೇಖಾ ಬಾವೀಶ್ ಗೆ ಫೋನ್ ಮಾಡಿ ಮಾತಾಡುತ್ತಿದ್ದಳು.  ಫೋನ್ ಮಾಡಿ ಮನೆಗೆ ಕರೆದು ಪ್ರೀತಿಯ ನಾಟಕವಾಡಿದ್ದಳು. ನಂತರ ಪತಿ, ಪತ್ನಿ ಇಬ್ಬರೂ ಸೇರಿ ಬಾವೀಶ್ ನನ್ನು ಬ್ಲಾಕ್ ಮೇಲ್ ಮಾಡಿದ್ದರು. 

ಇಂದು ಬಾವೀಶ್ ಪೊಲೀಸ್ ಮೊರೆ ಹೋಗಿದ್ದಾರೆ. ಬಸವನಗರ ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿ  ಹನಿಟ್ರ್ಯಾಪ್ ಮಾಡಿದ್ದ ದಂಪತಿಯನ್ನು  ಬಂಧಿಸಿದ್ದಾರೆ. 

loader