ಡ್ರೈವಿಂಗ್ ಲೈಸೆನ್ಸ್ ಮರಳಿಸಿದ 'ಪ್ರಾಮಾಣಿಕ ಕಳ್ಳ'

Honest thief returns driving licence to woman via courier
Highlights

ಕಾರಿನ ಗ್ಲಾಸ್ ಒಡೆದು, ಬೆಲೆ ಬಾಳುವ ಪರ್ಸ್ ಕದ್ದಿದ್ದ ಕಳ್ಳನೊಬ್ಬ ಪ್ರಾಮಾಣಿಕತೆ ತೋರಿದ್ದು, ಪರ್ಸಿನಲ್ಲಿದ್ದ ಚಾಲನಾ ಪರವಾನಗಿಯನ್ನು ಕೊರಿಯರ್ ಮೂಲಕ ಸಂಬಂಧಿಸಿದವರಿಗೆ ಮರಳಿಸಿದ್ದಾನೆ.

ಪುಣೆ: ಕಾರಿನ ಗ್ಲಾಸ್ ಒಡೆದು, ಬೆಲೆ ಬಾಳುವ ಪರ್ಸ್ ಕದ್ದಿದ್ದ ಕಳ್ಳನೊಬ್ಬ ಪ್ರಾಮಾಣಿಕತೆ ತೋರಿದ್ದು, ಪರ್ಸಿನಲ್ಲಿದ್ದ ಚಾಲನಾ ಪರವಾನಗಿಯನ್ನು ಕೊರಿಯರ್ ಮೂಲಕ ಸಂಬಂಧಿಸಿದವರಿಗೆ ಮರಳಿಸಿದ್ದಾನೆ.

ಮಾರ್ಚ್ 17ರಂದು ವಾನೌರಿ ಮೂಲದ ಉದ್ಯಮಿ ಸ್ವಪ್ನಾ ಡೇ ತಮ್ಮ ಕಾರಿನಲ್ಲಿ ಬೆಲೆ ಬಾಳುವ ಪರ್ಸ್, ಅದರಲ್ಲಿ ಲೈಸೆನ್ಸ್ ಸೇರಿ ಅಗತ್ಯ ವಸ್ತುಗಳನ್ನು ಇಟ್ಟು, ವಾಕಿಂಗ್‌ಗೆ ಹೋಗಿದ್ದರು. ಬರುವಷ್ಟರಲ್ಲಿ  ಕಾರಿನ ಗ್ಲಾಸ್ ಒಡೆದ ದುಷ್ಕರ್ಮಿಗಳು ಪರ್ಸನ್ನು ಎಗರಿಸಿದ್ದರು. ಆಗಿನಿಂದಲೂ ಚಾಲನಾ ಪರವಾನಗಿ ಪಡೆಯಲು ಯತ್ನಿಸುತ್ತಲೇ ಇದ್ದರು.

ಆದರೆ, ಮಾರ್ಚ್ 28ರಿಂದ ಅವರನ್ನು ಹುಡುಕಿಕೊಂಡು, ಕೊರಿಯರ್ ಒಂದು ಬಂದಿತ್ತು. ಒಡೆದು ನೋಡಿದರೆ ಡ್ರೈವಿಂಗ್ ಲೈಸೆನ್ಸ್! ಕಳ್ಳನ ಪ್ರಾಮಾಣಿಕತೆಯನ್ನು ಹಾಡಿ ಹೊಗಳಿರುವ ಸ್ವಪ್ನಾ, 'ಹೊಸ ಲೆಸೆನ್ಸ್ ಪಡೆಯಲು ಯತ್ನಿಸುತ್ತಿದ್ದೆ, ಕಳ್ಳ ಲೈಸೆನ್ಸ್ ಹಿಂಪಡಿಸಿರುವುದರಿಂದ ವ್ಯಯಿಸಬೇಕಾದ ಸಮಯ ಉಳಿಯಿತು,' ಎಂದು ಟೈಮ್ಸ್ ಆಫ್ ಇಂಡಿಯಾದೊಂದಿಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

ಅದೂ ಅಲ್ಲದೇ, ದೊಡ್ಡ ಮಗ ಉಡುಗೊರೆಯಾಗಿ ನೀಡಿದ್ದ ಬೆಲೆ ಬಾಳುವ ಪರ್ಸನ್ನೂ ಕಳ್ಳ ಕಳುಹಿಸಿದ್ದು, ಸ್ವಪ್ನಾ ಸಂತೋಷಕ್ಕೆ ಪಾರವೇ ಇಲ್ಲ. 

loader