ನವದೆಹಲಿ(ಏ.30): ಮಹತ್ವದ ಬೆಳವಣಿಗೆಯೊಂದರಲ್ಲಿ ನಾಗರಿಕತ್ವ ವಿವಾದಕ್ಕೆ ಸಂಬಂಧಪಟ್ಟಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಕೇಂದ್ರ ಗೃಹ ಸಚಿವಾಲಯ ನೊಟೀಸ್ ಜಾರಿ ಮಾಡಿದೆ.ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ನೀಡಿದ ದೂರನ್ನು ಸ್ವೀಕರಿಸಿರುವ ಗೃಹ ಸಚಿವಾಲಯ, ತಮ್ಮ ನಾಗರಿಕತ್ವಕ್ಕೆ ಸಂಬಂಧಪಟ್ಟಂತೆ ನೀಡಿರುವ ದೂರಿಗೆ 15 ದಿನಗಳೊಳಗೆ ವಿವರಣೆ ನೀಡುವಂತೆ ಸೂಚನೆ ನೀಡಿದೆ.

"

ಗೃಹ ಸಚಿವಾಲಯಕ್ಕೆ ಪತ್ರ ಬರೆದಿರುವ ಸುಬ್ರಹ್ಮಣ್ಯ ಸ್ವಾಮಿ, ಬ್ಯಾಕೊಪ್ಸ್ ಲಿಮಿಟೆಡ್ ಎನ್ನುವ ಕಂಪನಿ 2003ರಲ್ಲಿ ಇಂಗ್ಲೆಂಡ್‌ನಲ್ಲಿ ನೋಂದಣಿಯಾಗಿತ್ತು. 51ನೇ ಸೌತ್ ಗೇಟ್ ಸ್ಟ್ರೀಟ್, ವಿಂಚೆಸ್ಟರ್, ಹ್ಯಾಂಪ್ ಶೈರ್ ಎಸ್ಒ23 9ಇಎಚ್ ಎಂದು ವಿಳಾಸ ಬರೆಯಲಾಗಿದೆ. ಈ ಕಂಪನಿಯ ನಿರ್ದೇಶಕರಲ್ಲಿ ರಾಹುಲ್ ಗಾಂಧಿ ಅವರ ಹೆಸರಿದೆ ಎಂದು ತಿಳಿಸಿದ್ದಾರೆ.

ಬ್ಯಾಕೊಪ್ಸ್ 2005 ಅಕ್ಟೋಬರ್‌ನಿಂದ 2006ರ ಅಕ್ಟೋಬರ್‌ವರೆಗೆ ಸಲ್ಲಿಸಿರುವ ಐಟಿ ಸಲ್ಲಿಕೆಯಲ್ಲಿ ರಾಹುಲ್ ಗಾಂಧಿಯವರ ಹುಟ್ಟಿದ ದಿನಾಂಕ 19/06/1970 ಎಂದು ನಮೂದಾಗಿದೆ. ಅಲ್ಲದೆ ತಾವು ಬ್ರಿಟನ್ ಪ್ರಜೆ ಎಂದು ರಾಹುಲ್ ಗಾಂಧಿ ಘೋಷಿಸಿದ್ದಾರೆ.