ನವದೆಹಲಿ (ಅ.13): ಜೆ ಎನ್ ಯು ಕ್ಯಾಂಪಸ್ಸಿನಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಲವು ನಾಯಕರ  ಪ್ರತಿಕೃತಿ ದಹಿಸಿರುವುದು ದೇಶಾದ್ಯಂತ ಸುದ್ಧಿಯಾಗುತ್ತಿದ್ದು ಘಟನೆಯ ವರದಿ ನೀಡುವಂತೆ ಗೃಹ ಸಚಿವಾಲಯ ಪೋಲಿಸರಿಗೆ ಕೇಳಿದೆ.

ನವದೆಹಲಿ (ಅ.13): ಜೆ ಎನ್ ಯು ಕ್ಯಾಂಪಸ್ಸಿನಲ್ಲಿ ಪ್ರಧಾನಿ ಮೋದಿ ಸೇರಿದಂತೆ ಹಲವು ನಾಯಕರ ಪ್ರತಿಕೃತಿ ದಹಿಸಿರುವುದು ದೇಶಾದ್ಯಂತ ಸುದ್ಧಿಯಾಗುತ್ತಿದ್ದು ಘಟನೆಯ ವರದಿ ನೀಡುವಂತೆ ಗೃಹ ಸಚಿವಾಲಯ ಪೋಲಿಸರಿಗೆ ಕೇಳಿದೆ.

 ಕಾಂಗ್ರೆಸ್‌ ಪ್ರಾಯೋಜಿತ ಎನ್‌ಎಸ್‌ಯುಐ ಸಂಘಟನೆಯ ವಿದ್ಯಾರ್ಥಿಗಳು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಕೆಲವು ನಾಯಕರ ಪ್ರತಿಕೃತಿ ದಹಿಸಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಜೆಎನ್ ಯು ಉಪಕುಲಪತಿ ಈಗಾಗಲೇ ಘಟನೆಯ ತನಿಖೆ ಆರಂಭಿಸಿದ್ದಾರೆ. ಈ ರೀತಿಯ ಪ್ರತಿಭಟನೆ ನಡೆಸಲು ವಿದ್ಯಾರ್ಥಿಗಳಿಗೆ ಅನುಮತಿ ನೀಡಲಾಗಿತ್ತೇ ಎನ್ನುವ ಪ್ರಶ್ನೆಗೆ ವಿವಿ ಆಡಳಿತ ಸಿಬ್ಬಂದಿ ಪ್ರತಿಕ್ರಿಯೆ ನೀಡಿಲ್ಲ.