ರಾಮಲಿಂಗಾರೆಡ್ಡಿ-ಕೆಂಪಯ್ಯ ಮಧ್ಯೆ ಮತ್ತೆ ಭಿನ್ನಮತ ಸ್ಫೋಟ
ಬೆಂಗಳೂರು(ಸೆ.07): ಗೃಹ ಸಚಿವ ರಾಮಲಿಂಗಾರೆಡ್ಡಿ ಹಾಗೂ ಗೃಹ ಇಲಾಖೆಯ ಸಲಹೆಗಾರ ಕೆಂಪಯ್ಯ ಅವರ ನಡುವೆ ಭಿನ್ನಮತ ಸ್ಫೋಟವಾಗಿದೆ.
ಗೌರಿ ಲಂಕೇಶ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ರಚನೆ ವಿಚಾರದಲ್ಲಿ ಇಬ್ಬರ ನಡುವೆ ಭಿನ್ನಮತ ಸ್ಫೋಟಿಸಿದೆ. ಎಸ್ಐಟಿ'ಗೆ ಹೇಮಂತ್ ನಿಂಬಾಳ್ಕರ್ ಅವರ ನೇತೃತ್ವ ವಹಿಸುವಂತೆ ಕೆಂಪಯ್ಯ ಅವರು ಪಟ್ಟು ಹಿಡಿದಿದ್ದರು. ಆದರೆ ಕೆಂಪಯ್ಯ ಅವರ ಸಲಹೆಯನ್ನು ತಿರಸ್ಕರಿಸಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರು ಬಿ.ಕೆ. ಸಿಂಗ್'ರನ್ನು ಎಸ್'ಐಟಿ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ. ಈ ಕಾರಣದಿಂದ ಮತ್ತೊಮ್ಮೆ ಇಬ್ಬರ ನಡುವೆ ಮತ್ತೊಮ್ಮೆ ಭಿನ್ನಮತ ಸ್ಫೋಟಿಸಿದೆ.
