ಬೆಂಕಿ ಹಚ್ಚುವುದು ಹಾಗೂ ದಂಗೆ ಎಬ್ಬಿಸುವುದು ನಿಮ್ಮ ಉದ್ಯೋಗ. ಸದಾ ಬೆಂಕಿ ಉಗುಳುವ ಸಿಂಹಕ್ಕೆ ಕಾಡೇ ಪ್ರಶಸ್ತವಾದ ತಾಣ, ನಾಡಲ್ಲ ಎಂದು ಪ್ರತಾಪ್ ಸಿಂಹ ವಿರುದ್ಧ ಗೃಹ ಸಚಿವ R.ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು (ಫೆ.03): ಬೆಂಕಿ ಹಚ್ಚುವುದು ಹಾಗೂ ದಂಗೆ ಎಬ್ಬಿಸುವುದು ನಿಮ್ಮ ಉದ್ಯೋಗ. ಸದಾ ಬೆಂಕಿ ಉಗುಳುವ ಸಿಂಹಕ್ಕೆ ಕಾಡೇ ಪ್ರಶಸ್ತವಾದ ತಾಣ, ನಾಡಲ್ಲ ಎಂದು ಪ್ರತಾಪ್ ಸಿಂಹ ವಿರುದ್ಧ ಗೃಹ ಸಚಿವ R.ರಾಮಲಿಂಗಾ ರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಜಾತಿ, ಧರ್ಮದ ಮೂಲಕ ಚುನಾವಣೆ ದಂಗೆ ಎಬ್ಬಿಸುವುದಕ್ಕೆ ನಾವು ಬಿಡಲ್ಲ. ತಪ್ಪೆಸಗಿದವರನ್ನು ರಾಜ್ಯ ಸರ್ಕಾರ ಬಿಟ್ಟಿಲ್ಲ ಹಾಗೂ ಬಿಡುವುದೂ ಇಲ್ಲ ಎಂದಿದ್ದಾರೆ.

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರವೇ ತಾಲಿಬಾನ್ ಸಂಸ್ಕೃತಿ ಇದೆ. ಗುಜರಾತ್​'​​​ನಲ್ಲಿ ಮೋದಿ ಸಿಎಂ ಆಗಿದ್ದ ಸಂದರ್ಭದಲ್ಲಿ ನರಮೇಧ ನಡೆದಿತ್ತು. ಹರಿಯಾಣದಲ್ಲಿ ರಾಮ್ ರಹೀಂ ಸೆರೆಯ ವೇಳೆ ಹಿಂಸಾಚಾರ ನಡೆದಿತ್ತು. ಮಹಾರಾಷ್ಟ್ರ ಕೋರೆಗಾಂವ್ ಪ್ರದೇಶದಲ್ಲಿ ದಲಿತರ ಪ್ರಕರಣದ ಗಲಭೆ, ಉ.ಪ್ರ ಅಪರಾಧ ಪ್ರಕರಣಗಳೆಲ್ಲಾ ಬಿಜೆಪಿ ಆಡಳಿತದಲ್ಲಿ ನಡೆದ ಗಲಭೆಗಳಿಗೆ ಸಾಕ್ಷಿ ಎಂದು ರಾಮಲಿಂಗಾರೆಡ್ಡಿ ಟೀಕಿಸಿದ್ದಾರೆ.