ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವ ನೀಡಿದ್ದ ಭರವಸೆಗಳನ್ನು ಪೂರ್ಣವಾಗಿ ಜಾರಿ ಮಾಡಿದೆ, ಆದರೆ, ಕೇಂದ್ರದ ಬಿಜೆಪಿ ಸರ್ಕಾರ, ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳ ಹೆಸರು ಬದಲು ಮಾಡಿರುವುದರ ಹೊರತು ಹೊಸದೇನು ಮಾಡಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಟೀಕಿಸಿದ್ದಾರೆ.

ಆನೇಕಲ್: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವ ನೀಡಿದ್ದ ಭರವಸೆಗಳನ್ನು ಪೂರ್ಣವಾಗಿ ಜಾರಿ ಮಾಡಿದೆ, ಆದರೆ, ಕೇಂದ್ರದ ಬಿಜೆಪಿ ಸರ್ಕಾರ, ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಯೋಜನೆಗಳ ಹೆಸರು ಬದಲು ಮಾಡಿರುವುದರ ಹೊರತು ಹೊಸದೇನು ಮಾಡಿಲ್ಲ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಟೀಕಿಸಿದ್ದಾರೆ.

ತಾಲೂಕಿನ ಹೆನ್ನಾಗರದಲ್ಲಿ ರಾಜ್ಯ ಸರ್ಕಾರ, ಸಂಸದರ ನಿಧಿ, ಪಂಚಾಯಿತಿ ನಿಧಿ ಹಾಗೂ ಸಿಎಸ್‌ಆರ್ ನಿಧಿಯಡಿ ಸುಮಾರು ₹20 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಹಾರಾಷ್ಟ್ರ ಸರ್ಕಾರಕ್ಕೆ ಬರ ವಿಪತ್ತು ಅಡಿ ₹8000 ಕೋಟಿ ಕೊಡುವ ಕೇಂದ್ರ, ಕರ್ನಾಟಕಕ್ಕೆ ಕೇವಲ ₹1800 ಕೋಟಿ ನೀಡಿ ಮಲತಾಯಿ ಧೋರಣೆ ತಳೆದಿದೆ ಎಂದು ಟೀಕಿಸಿದರು. ಸಂಸದ ಡಿ.ಕೆ. ಸುರೇಶ್ ಮಾತನಾಡಿ, ಕೆಲವೇ ದಿನಗಳಲ್ಲಿ ಕಾವೇರಿ ನೀರು ಆನೇಕಲ್ ಹಾಗೂ ಬೆಂಗಳೂರು ದಕ್ಷಿಣ ವ್ಯಾಪ್ತಿಗೆ ದೊರೆಯಲಿದೆ.

ಎಸ್‌ಟಿಪಿ ರಚನೆ ಹಾಗೂ ನೀರು ಮನೆ ಮನೆಗೆ ನೀರಿನ ಪೂರೈಕೆಗೆ ಆದ್ಯತೆ ನೀಡಬೇಕು. ರಸ್ತೆ , ಚರಂಡಿ, ಬೀದಿ ದೀಪಗಳು ನಂತರದ್ದಾಗಲಿ ಎಂದರು. ಹೆನ್ನಾಗರ ಗ್ರಾ.ಪಂ. ಅಧ್ಯಕ್ಷ ಕೇಶವರೆಡ್ಡಿ, ಶಾಸಕ ಎಂ. ಕೃಷ್ಣಪ್ಪ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿ. ನಾಗರಾಜ್, ಬಮೂಲ್ ಮಾಜಿ ಅಧ್ಯಕ್ಷ ಆರ್.ಕೆ. ರಮೇಶ್, ಹಾಪ್‌ಕಾಮ್ಸ್ ಬಾಬು, ಜಿ.ಪಂ. ಸದಸ್ಯ ಪ್ರಸನ್ನಕುಮಾರ್, ಸುಷ್ಮಾ ಆರ್ ರೆಡ್ಡಿ, ಪಾಲಿಕೆ ಸದಸ್ಯರಾದ ಆಂಜಿನಪ್ಪ ವೇದಿಕೆಯಲ್ಲಿದ್ದರು.