ಸುವರ್ಣ ನ್ಯೂಸ್ ನಡೆಸಿದ ಲೈವ್ ಬ್ಯಾಂಡ್ ಸ್ಟಿಂಗ್ ಆಪರೇಶನ್ ವರದಿಯನ್ನು ನೋಡಿದ ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.  

ಬೆಂಗಳೂರು (ನ.21): ಸುವರ್ಣ ನ್ಯೂಸ್ ನಡೆಸಿದ ಲೈವ್ ಬ್ಯಾಂಡ್ ಸ್ಟಿಂಗ್ ಆಪರೇಶನ್ ವರದಿಯನ್ನು ನೋಡಿದ ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

ನಾನು ಅಧಿಕಾರ ವಹಿಸಿಕೊಂಡು ಕೆಲವೇ ದಿನವಾಗಿದೆ. ಈಗಾಗಲೇ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಸುವರ್ಣ ನ್ಯೂಸ್ ವರದಿಯ ಕ್ಲಿಂಪ್ಪಿಂಗ್ ಕಳುಹಿಸಿ ಎಂದು ಹೇಳಿದ್ದಾರೆ. ಲೈವ್ ಬ್ಯಾಂಡ್ ನಡೆಯುವ ಆಯಾ ಪೊಲೀಸ್ ಠಾಣೆಗಳ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ. ಯಾರೇ ಅಧಿಕಾರಿ ಇರಲಿ, ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ರಾಮಲಿಂಗಾರೆಡ್ಡಿ ನಿರ್ದೇಶನ ನೀಡಿದ್ದಾರೆ. ಲೇಡಿಸ್​ ಬಾರ್​ ಹೆಸರಿನಲ್ಲಿ ಲೈವ್​ ಬ್ಯಾಂಡ್​ ದಂಧೆಯನ್ನು ರಹಸ್ಯ ಕಾರ್ಯಾಚರಣೆಯನ್ನು ನಿನ್ನೆ ರಾತ್ರಿ ಸುವರ್ಣ ನ್ಯೂಸ್ ಬಹಿರಂಗಪಡಿಸಿತ್ತು.