ಸುಪಾರಿ ಹಂತಕರಿಗೆ ಮಹಾರಾಷ್ಟ್ರ, ಉತ್ತರ ಪ್ರದೇಶದಿಂದ ಶಸ್ತ್ರಾಸ್ತ್ರ ಬರುತ್ತಿವೆ. ಗೌರಿ ಲಂಕೇಶ್ ಹತ್ಯೆ ಸೇರಿದಂತೆ ಇತರೆ ಕೇಸ್ ತನಿಖೆ ವೇಳೆ ಇದು ಗೊತ್ತಾಗಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. 

ಉಡುಪಿ (ಮಾ. 05): ಸುಪಾರಿ ಹಂತಕರಿಗೆ ಮಹಾರಾಷ್ಟ್ರ, ಉತ್ತರ ಪ್ರದೇಶದಿಂದ ಶಸ್ತ್ರಾಸ್ತ್ರ ಬರುತ್ತಿವೆ. ಗೌರಿ ಲಂಕೇಶ್ ಹತ್ಯೆ ಸೇರಿದಂತೆ ಇತರೆ ಕೇಸ್ ತನಿಖೆ ವೇಳೆ ಇದು ಗೊತ್ತಾಗಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. 

ಅಲ್ಲಿನ ಸರ್ಕಾರಗಳು ಅಕ್ರಮವಾಗಿ ಪಿಸ್ತೂಲ್ ಸೇರಿದಂತೆ ಶಸ್ತ್ರಾಸ್ತ್ರ ಮಾರಾಟ ಅಂಗಡಿ ಬಂದ್ ಮಾಡಬೇಕು. ಕೊಲೆಗಾರರು, ಸುಫಾರಿ ಹಂತಕರು ಈ ಎರಡೂ ರಾಜ್ಯಗಳಿಂದ ತರುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿರುವುದು ಆ ರಾಜ್ಯಗಳ ಜವಾಬ್ದಾರಿ. ರಾಜ್ಯಗಳಲ್ಲಿ ನಡೆದ ಕೆಲ ಹತ್ಯೆಗಳಿಗೆ ಇಲ್ಲಿಂದ ತಂದ ಶಸ್ತ್ರಾಸ್ತ್ರ ಬಳಕೆಯಾಗಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. 

ಇದೇ ಸಂದರ್ಭದಲ್ಲಿ ಗೋ ಮಾಂಸ ರಫ್ತಿನ ಬಗ್ಗೆ ಪ್ರಸ್ತಾಪಿಸುತ್ತಾ, ಕೇಂದ್ರ ಸರ್ಕಾರ ಮೊದಲು ಗೋಮಾಂಸ ರಫ್ತನ್ನು ನಿಷೇಧೀಸಲಿ. ಬಿಜೆಪಿಯವರು ಕೇವಲ ಗೋಹತ್ಯೆ ಬಗ್ಗೆ ಮಾತ್ರ ಮಾತನಾಡುತ್ತಾರೆ. ಎಲ್ಲಾ ಪ್ರಾಣಿಗಳ ಹತ್ಯೆಯನ್ನ ಕೇಂದ್ರ ನಿಷೇಧ ಮಾಡಲಿ. ಇದಕ್ಕೆ ನಾವು ಬೆಂಬಲ, ಸಹಕಾರ ನೀಡುತ್ತೇನೆ ಎಂದಿದ್ದಾರೆ.