ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಾಜ್ಯಪಾಲರನ್ನು ಭೇಟಿಯಾಗಿ ಕಾವೇರಿ ಹಾಗೂ ರಾಜ್ಯದಲ್ಲಿನ ಇತ್ತಿಚಿನ ಹತ್ಯೆಗಳ ಬಗ್ಗೆ ವಿವರಣೆ ನೀಡಿದರು. ರಾಜ್ಯಪಾಲರು ನನ್ನನ್ನು ಕರೆಸಿರಲಿಲ್ಲ. ನಾನೇ ವಾಲೆಂಟರಿಯಾಗಿ ಬಂದು ಮಾಹಿತಿ ನೀಡಿದ್ದೇನೆ. ಬಿಜೆಪಿಯ ನಾಯಕರು ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದರು.

ಬೆಂಗಳೂರು (ಅ.21): ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಾಜ್ಯಪಾಲರನ್ನು ಭೇಟಿಯಾಗಿ ಕಾವೇರಿ ಹಾಗೂ ರಾಜ್ಯದಲ್ಲಿನ ಇತ್ತಿಚಿನ ಹತ್ಯೆಗಳ ಬಗ್ಗೆ ವಿವರಣೆ ನೀಡಿದರು. ರಾಜ್ಯಪಾಲರು ನನ್ನನ್ನು ಕರೆಸಿರಲಿಲ್ಲ. ನಾನೇ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವಾಲೆಂಟರಿಯಾಗಿ ಬಂದು ಮಾಹಿತಿ ನೀಡಿದ್ದೇನೆ. ಬಿಜೆಪಿಯ ನಾಯಕರು ಸರ್ಕಾರದ ವಿರುದ್ಧ ಹೇಳಿಕೆ ನೀಡಿದ್ದರು.

ಹಾಗೆಯೇ ರಾಜ್ಯಪಾಲರಿಗೂ ದೂರು ನೀಡಿದ್ದರು. ಹೀಗಾಗಿ ನಾನು ಇಂದು ರಾಜ್ಯಪಾಲರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ ಎಂದು ಪರಮೇಶ್ವರ್ ಹೇಳಿದರು.

ರುದ್ರೇಶ್ ಹತ್ಯೆಯ ತನಿಖೆಯನ್ನು ಸಿಬಿಐ ಹಾಗೂ ಎನ್ ಐ ಎ ಗೆ ಕೊಡಲು ಸಾಧ್ಯವಿಲ್ಲ. ನಮ್ಮ ಪೊಲೀಸರು ಸಮರ್ಥರಿದ್ದಾರೆ ಎಂದು ಸರ್ಕಾರವನ್ನು ಸಮರ್ಥಿಸಿಕೊಂಡರು.

ನಮ್ಮನ್ನ ದೂಷಿಸುವುದಕ್ಕೆ ಬಿಜೆಪಿಯವರಿಗೆ ನೈತಿಕತೆಯಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.