ವಿಜಯಪುರ, [ಮಾ.08]: ಉದ್ದಗೆ ನಾಮ ಎಳೆದುಕೊಂಡವರನ್ನು ಕಂಡ್ರೆ ಭಯವಾಗುತ್ತೆಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಮೇಲಾಗಿ ಅಂತಹ ಕಾಂಟರ್ವರ್ಸಿ ಮೈಮೇಲೆ ಹಾಕಿಕೊಳ್ಳಲು ನನಗೆ ಇಷ್ಟವಿಲ್ಲವೆಂದು ಹೇಳುವ ಮೂಲಕ ಗೃಹ ಸಚಿವ ಎಂ ಬಿ ಪಾಟೀಲ್ ತಿಲಕದ ವಿವಾದದಿಂದ ದೂರ ಸರೆದಿದ್ದಾರೆ. 

ತಿಲಕ ಇಟ್ಟವರ ಕಂಡರೆ ಭಯ, ಸಿದ್ದರಾಮಯ್ಯ ಅವರೇ ಕೊಟ್ಟ ಸ್ಪಷ್ಟನೆ

ವಿಜಯಪುರದ ತುಬಚಿ-ಬಬಲೇಶ್ವರ ಜಾಕ್ವೆಲ್ ಕಾಮಗಾರಿ ವಿಕ್ಷಿಸಿದ ಬಳಿಕ ಮಾತನಾಡಿದ ಎಂಬಿಪಿ, ತಿಲಕದ ಬಗ್ಗೆ ನನಗೆ ಗೊತ್ತಿಲ್ಲ. ಅಲ್ಲದೇ ಅನಗತ್ಯ ವಿವಾದಗಳು ನನಗೆ  ಬೇಕಿಲ್ಲ ಎಂದು ಹೇಳಿ ತಿಲಕದ ಸಹವಾಸದಿಂದ ದೂರ ಉಳಿದರು. 

ಸಿದ್ದರಾಮಯ್ಯ ವಿರುದ್ಧ 'ಸೆಲ್ಫಿ ವಿತ್ ತಿಲಕ' ಅಭಿಯಾನ!

ಉದ್ದ ನಾಮ ಇಟ್ಟವರನ್ನು ಕಂಡರೆ ನನಗೆ ಭಯ ಎಂದು ಬಿಜೆಪಿ ಬಗ್ಗೆ ವ್ಯಂಗ್ಯವಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆರಂಭಿಸಿರುವ 'ಸೆಲ್ಫಿ ವಿತ್‌ ತಿಲಕ್‌ ' ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.