Asianet Suvarna News Asianet Suvarna News

ಅತೀ ಕಡಿಮೆ ಬಡ್ಡಿದರದಲ್ಲಿ ಗೃಹಸಾಲಗಳು: ಸಂಪೂರ್ಣ ಪ್ರಯೋಜನ ಪಡೆಯುವುದು ಹೇಗೆ?

ಒಂದು ಕಡೆ 2015ರಿಂದ ಬಡ್ಡಿ ದರಗಳು ಇಳಿಮುಖವಾಗಿವೆ. ಇನ್ನೊಂದು ಕಡೆ ಭಾರತೀಯ ರಿಸರ್ವ್  ಬ್ಯಾಂಕ್ (ಆರ್’ಬಿಐ) ಕೂಡಾ ಸುಮಾರು 6 ತಿಂಗಳುಗಳಿಂದ ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಸರ್ಕಾರದ ಅಪಮೌಲ್ಯೀಕರಣ ಕ್ರಮದ ಬಳಿಕ ಬ್ಯಾಂಕುಗಳು ಬಡ್ಡಿ ದರವನ್ನು ಇಳಿಸುತ್ತಲೇ ಬಂದಿವೆ.

Home loans are cheaper now here is how you can make the most of it

ಒಂದು ಕಡೆ 2015ರಿಂದ ಬಡ್ಡಿ ದರಗಳು ಇಳಿಮುಖವಾಗಿವೆ. ಇನ್ನೊಂದು ಕಡೆ ಭಾರತೀಯ ರಿಸರ್ವ್  ಬ್ಯಾಂಕ್ (ಆರ್’ಬಿಐ) ಕೂಡಾ ಸುಮಾರು 6 ತಿಂಗಳುಗಳಿಂದ ರೆಪೋ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಸರ್ಕಾರದ ಅಪಮೌಲ್ಯೀಕರಣ ಕ್ರಮದ ಬಳಿಕ ಬ್ಯಾಂಕುಗಳು ಬಡ್ಡಿ ದರವನ್ನು ಇಳಿಸುತ್ತಲೇ ಬಂದಿವೆ.

2016ರ ಕೊನೆಯಲ್ಲಿ ಭಾರತೀಯ ಸ್ಟೇಟ್ಸ್ ಬ್ಯಾಂಕ್ (ಎಸ್’ಬಿಐ) ಒಂದು ವರ್ಷ ಅವಧಿಯ MCLR ಯೋಜನೆಯಲ್ಲಿ 90 ಪಾಯಿಂಟ್ಸ್’ಗಳಷ್ಟು ಕಡಿತ ಮಾಡಿ ದರವನ್ನು 8.00ಕ್ಕೆ ನಿಗದಿಪಡಿಸಿತ್ತು.  ಇತ್ತೀಚೆಗೆ ಇನ್ನೊಂದು ಬಾರಿ ದರ ಕಡಿತ ಮಾಡಿರುವ ಎಸ್’ಬಿಐ 15 ಪಾಯಿಟಂಟ್’ಗಳನ್ನು ಕಡಿತ ಮಾಡುವ ಮೂಲಕ ದರಗಳನ್ನು 9.10ಕ್ಕೆ ನಿಗದಿಪಡಿಸಿದೆ. ಇತರ ಬ್ಯಾಂಕಿಂಗ್ ಹಾಗು ಹಣಕಾಸು ಸಂಸ್ಥೆಗಳು ಕೂಡಾ ಬಡ್ಡಿ ದರಗಳಲ್ಲಿ ಕಡಿತ ಮಾಡಿವೆ.

ಅದರಿಂದ ಗ್ರಾಹಕರಿಗೇನು ಲಾಭ?

ಬಡ್ಡಿದರಗಳು ಭಾರೀ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಗೃಹ ಸಾಲ ಪಡೆಯಲು ಈಗ ಪ್ರಶಸ್ತ ಸಮಯ. ಆದುದರಿಂದ ಗ್ರಾಹಕರು ದೊಡ್ಡ ಪ್ರಮಾಣದ ಸಾಲವನ್ನು ಪಡೆಯಬಹುದು ಅಥವಾ ಸಣ್ಣ ಕಂತು ಗಳನ್ನು (ಇಎಂಐ/EMI) ಸೌಲಭ್ಯ ಪಡೆಯಬಹುದಾಗಿದೆ. ಗ್ರಾಹಕರ ಹಿತಾಸಕ್ತಿ ಕಾಪಾಡಲೆಂದೇ ಜಾರಿಯಾಗಲಿರುವ ರೇರಾ ಕಾಯ್ದೆ [Real Estate (Regulation & Development0]ಯು ಕೂಡಾ ಈ ಸಂದರ್ಭದಲ್ಲಿ ಗಮನಾರ್ಹ ಅಂಶ.

ನೀವಿಗಾಗಲೇ ಸಾಲ ಪಡೆದಿದ್ದರೆ, ಪ್ರಧಾನ ಮೊತ್ತವನ್ನು ಮುಂಗಡ ಪಾವತಿಸುವ ಮೂಲಕ ಸಾಲದ ಮೊತ್ತದ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಈಗ ಸೂಕ್ತ ಸಮಯ. ಆ ಮೂಲಕ ದೀರ್ಘಾವಧಿ ಉಳಿತಾಯವನ್ನು ಮಾಡಿಕೊಳ್ಳಬಹುದು. ಬಡ್ಡಿ-ದರಗಳು ಕುಸಿಯುತ್ತಿರುವುದರಿಂದ ಶೀಘ್ರದಲ್ಲೇ ಏರುವ ಸಾಧ್ಯತೆಗಳಿರುವುದನ್ನು ಅಲ್ಲಗಳೆಯಲಾಗದು.

ನೀವೀಗ ಪಾವತಿಸುತ್ತಿರುವ ಬಡ್ಡಿ-ದರದಿಂದ ಸಂತುಷ್ಟರಾಗಿಲ್ಲವೆಂದಾದಲ್ಲಿ,  MCLR ಸಂಯೋಜಿತ ಸಾಲ ಯೋಜನೆಗೆ ವರ್ಗಾಯಿಸಿಕೊಳ್ಬಲು ಕೂಡಾ ಇದು ಸಕಾಲ.

ಏನಿದು MCLR (Marginal Cost of Lending Rate) ಸಂಯೋಜಿತ  ಸಾಲ ಯೋಜನೆ?

ಈ ಹಿಂದೆಯಿದ್ದ ಕನಿಷ್ಠ ದರ (Base Rate) ಪದ್ಧತಿಗೆ ವಿದಾಯ ಹೇಳಿ, 1 ಏಪ್ರಿಲ್ 2016ರಿಂದ ಅಸ್ಥಿರ (Floating) ಬಡ್ಡಿದರದ ಆಧಾರದಲ್ಲಿ ಉತ್ಪನ್ನಗಳನ್ನು ಬ್ಯಾಂಕುಗಳು ನೀಡಲು ಆರಂಭಿಸಿವೆ. 1 ಏಪ್ರಿಲ್ 2016ಕ್ಕಿಂತ ಹಿಂದೆ ಪಡೆದಿದ್ದ ಸಾಲಗಳನ್ನು ಹಿಂದಿನ ನಿಯಮಗಳನುಸಾರ ಮುಂದುವರೆಸುವ ಆಯ್ಕೆ ಇದ್ದೇ ಇದೆ.

ಆರ್’ಬಿಐ ಮಾಡುವ ದರ ಬದಲಾವಣೆಗಳಿಗೆ ಅನುಗುಣವಾಗಿ MCLR ಪದ್ಧತಿಯಲ್ಲಿ ಬಡ್ಡಿದರಗಳು ಮಾರ್ಪಾಡಾಗುವುದರಿಂದ  ಗ್ರಾಹಕರಿಗೆ ನಿರ್ದಿಷ್ಟ ಸಮಯದೊಳಗೆ ಹಾಗೂ ಪಾರದರ್ಶಕವಾಗಿ ದರ ಕಡಿತದ  ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಪರಿಷ್ಕೃತ ಬಡ್ಡಿದರಗಳಿಗೆ ಅನುಗುಣವಾಗಿ ದರಗಳು ಕೂಡಾ ತನ್ನಿಂತಾನೇ ಮಾರ್ಪಾಡಾಗುತ್ತವೆ.

ನಿಮ್ಮ ಸಾಲವನ್ನು ಹೇಗೆ ವರ್ಗಾಯಿಸಬಹುದು?

ನೀವು ಈಗಾಗಲೇ ಪಾವತ್ತಿಸುತ್ತಿರುವ ಬಡ್ಡಿದರದಿಂದ ಅಸಂತುಷ್ಟರಾಗಿದ್ದೀರಿ ಎಂದು ಊಹಿಸಿಕೊಳ್ಳೋಣ. ಉದಾಹರಣೆಗೆ, ನೀವು 9.5% ಬಡ್ಡಿದರವನ್ನು ಪಾವತಿಸುತ್ತಿದ್ದೀರಿ, ಆದರೆ ಮಾರುಕಟ್ಟೆಯಲ್ಲಿ ದರಗಳು 8.5% ಗೆ ಇಳಿದಿವೆ. ಆಗ ನಿಮ್ಮ ಹಾಲಿ ಸಾಲವನ್ನು MCLR ಸಂಯೋಜಿತ ಯೋಜನೆಗೆ ವರ್ಗಾಯಿಸಿಕೊಳ್ಬಬಹುದಾಗಿದೆ. ಹಾಗೆ ಮಾಡಲು ನಿಮಗೆ 2 ಆಯ್ಕೆಗಳಿವೆ:

ನೀವು ಈಗಾಗಲೇ ಸಾಲ ಪಡೆದಿರುವ ಬ್ಯಾಂಕ್/ಹಣಕಾಸು ಸಂಸ್ಥೆಯೊಳಗೆನೇ ಸಾಲವನ್ನು ಹೊಸ ಯೋಜನೆಗೆ ವರ್ಗಾಯಿಸಿಕೊಳ್ಳಬಹುದು. ಹೀಗೆ ಮಾಡಿದ್ದಲ್ಲಿ ಕೆಲಸವೂ ಕಡಿಮೆಯಾಗುತ್ತದೆ ಹಾಗೂ  ಸಾಲ ವರ್ಗಾವಣೆ ಶುಲ್ಕವನ್ನು ಉಳಿಸಿದಂತಾಗುತ್ತದೆ.

ಸಾಲ ಮಂಜೂರಾತಿ ಪ್ರಕ್ರಿಯೆ ಮೂಲಕ ಇನ್ನೊಂದು ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಅರ್ಜಿ ಸಲ್ಲಿಸಿ ಸಾಲವನ್ನು ಅಲ್ಲಿಗೂ ವರ್ಗಾಯಿಸಿಕೊಳ್ಳಬಹುದು. ಹೀಗೆ ಮಾಡಿದ್ದಲ್ಲಿ ಕೆಲಸವೂ ಹೆಚ್ಚಾಗುತ್ತದೆ ಹಾಗೂ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.  ಆ ಸಂದರ್ಭದಲ್ಲಿ ವರ್ಗಾವಣೆ ಶುಲ್ಕವನ್ನು ಖಚಿತಪಡಿಸಿಕೊಂಡು, ಹೆಚ್ಚು ಉಳಿತಾಯವಾಗುವುದನ್ನು ಆಯ್ಕೆ ಮಾಡಿಕೊಳ್ಳಬಹುದು. ಸಾಲ ಲೆಕ್ಕಾಚಾರವನ್ನು ಸಾಲ ಪಡೆದ ಸಂಸ್ಥೆಯ ಸಹಾಯದಿಂದ ಲೆಕ್ಕ ಹಾಕಬಹುದು ಅಥವಾ ಆನ್’ಲೈನ್ EMI ಕ್ಯಾಲ್ಕುಲೇಟರ್ ಮೂಲಕವೂ ತಿಳಿದುಕೊಳ್ಳಬಹುದು.

ವರ್ಗಾಯಿಸುವ ಮೂಲಕ ಎಷ್ಟು ಉಳಿತಾಯ ಮಾಡಬಹುದು?

ಜನವರಿ 2014ರಲ್ಲಿ ಶೇ.10 ದರದಲ್ಲಿ ನೀವು 20 ವರ್ಷಗಳ ಅವಧಿಗೆ ರೂ.30 ಲಕ್ಷ ಸಾಲ ಪಡೆದಿದ್ದೀರಿ ಎಂದು ಭಾವಿಸಿ. 20 ವರ್ಷಗಳ ಅವಧಿಗೆ ನೀವು ಪಾವತಿಸಬೇಕಾದ ಮೊತ್ತ ರೂ.30.48 ಲಕ್ಷವಾಗಿರುತ್ತದೆ. 36 ಕಂತುಗಳಲ್ಲಿ ನೀವು ರೂ. 8.77 ಲಕ್ಷ ಮೊತ್ತ ಪಾವತಿಸುತ್ತೀರಿ.  ಆಗ 3 ವರ್ಷಗಳ ಕೊನೆಯಲ್ಲಿ ಬಾಕಿ ಮೊತ್ತ ರೂ.28.34 ಲಕ್ಷವಾಗಿರುತ್ತದೆ.

ಈ ಅವಧಿಯಲ್ಲಿ, ಮುಂದಿನ 17 ವರ್ಷಗಳ ಮಟ್ಟಿಗೆ ನೀವು ನಿಮ್ಮ ಸಾಲ ಯೋಜನೆಯನ್ನು ಶೇ. 8.6 ದರವಿರುವ ಇನ್ನೊಂದು ಯೋಜೆನೆಗೆ ಬದಲಾಯಿಸಲು ನಿರ್ಧರಿಸುತ್ತೀರಿ ಎಂದು ಭಾವಿಸಿಕೊಳ್ಳಿ.  ಆಗ ನೀವು ಪಾವತಿಸಬೇಕಾದ ಮೊತ್ತ ರೂ.25.68 ಲಕ್ಷಕ್ಕೆ ಇಳಿಯುತ್ತದೆ. ಸಾಲ ವರ್ಗಾವಣೆ ವೆಚ್ಚವನ್ನು ಕಳೆದು, ರೂ. 39. 48 ಲಕ್ಷ ಮೊತ್ತದಲ್ಲಿ ನೀವು ರೂ. 5. 03 ಲಕ್ಷವನ್ನುಳಿಸಿದಂತಾಗುತ್ತದೆ.

ಮುಂಗಡವಾಗಿ ಪಾವತಿಸುವ ಮೂಲಕ ಎಷ್ಟು ಹಣ ಉಳಿತಾಯ ಮಾಡಬಹುದು?

ಬಡ್ಡಿ ದರವು ಕಡಿಮೆಯಾಗಿರುವಾಗ ಮುಂಗಡವಾಗಿ ಪಾವತಿಸಿದರೆ  ನಿಮಗೆ ಭಾರೀ ಲಾಭವಾಗುವುದು. ಮೇಲಿನ ಉದಾಹರಣೆಯನ್ನೇ ಮುಂದಿಟ್ಟುಕೊಂಡು ಲೆಕ್ಕ ಹಾಕೋಣ:

37ನೇ ಕಂತಿನಲ್ಲಿ ನೀವು ರೂ. 1 ಲಕ್ಷವನ್ನು ಮುಂಗಡವಾಗಿ ಪಾವತ್ತಿಸುತ್ತೀರಿ ಎಂದುಕೊಳ್ಳೊಣ. ಆಗ ನಿಮ್ಮ ಸಾಲ ಮೊತ್ತ  ರೂ. 35.44 ಲಕ್ಷಗಳಿಗೆ ಇಳಿಯುತ್ತದೆ ಹಾಗೂ ನಿಮಗೆ ರೂ. 4.04 ಲಕ್ಷ ಉಳಿತಾಯವಾಗುತ್ತದೆ.

ಅದೇ ರೂ. 1 ಲಕ್ಷ ಮೊತ್ತವನ್ನು ಶೇ. 8.6 ಬಡ್ಡಿದರವಿರುವಾಗ ಪಾವತಿಸಿದರೆ, ನಿಮ್ಮ ಸಾಲ ಮೊತ್ತ ರೂ. 31. 4 ಲಕ್ಷಕ್ಕೆ ಇಳಿಯುತ್ತದೆ ಹಾಗೂ ನೀವು ಒಟ್ಟು ಮೊತ್ತದಲ್ಲಿ ರೂ. 8.08 ಲಕ್ಷವನ್ನು ಉಳಿಸಬಹುದಾಗಿದೆ.

ಭಾರತದಲ್ಲಿ ಮನೆ ಖರೀದಿಸಲು ಈಗ ಪ್ರಶಸ್ತ ಸಮಯ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಇಳಿಮುಖ, ರೇರಾ ಕಾಯ್ದೆ ಜಾರಿ ಹಾಗೂ ಇಳಿದಿರುವ ಬಡ್ಡಿದರಗಳು ನಿಮ್ಮ ಮನೆಯ ಕನಸನ್ನು ಸಾಕಾರಗೊಳಿಸುವುದರಲ್ಲಿ ಸಂಶಯವಿಲ್ಲ.

Home loans are cheaper now here is how you can make the most of it

ಲೇಖಕರು: ಆಧಿಲ್ ಶೆಟ್ಟಿ,

ಸಿಇಓ- ಬ್ಯಾಂಕ್ ಬಝಾರ್

 

Follow Us:
Download App:
  • android
  • ios