10 ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರ ತಾಲೂಕಿನಲ್ಲಿ ಕೇಳುವವರಿಲ್ಲದಾಗಿದೆ. ಕಾಂಗ್ರೆಸ್'ನಲ್ಲಿ ಸರಿಯಾದ ನಾಯಕನಿಲ್ಲ' ಎಂದ ಕಾರ್ಯಕರ್ತರು ವೀಕ್ಷಕರೆದುರೆ ಮಾರಾಮಾರಿ ನಡೆಸಿದರು.

ಹಾಸನ(ಆ.29): ಹೊಳೆನರಸಿಪುರದಲ್ಲಿ 10 ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅವರ ಎದುರೆ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಚಿವ ಎ.ಮಂಜು ಭಾಷಣ ಮಾಡುವ ಸಂದರ್ಭದಲ್ಲಿ ಅವರ ಭಾಷಣಕ್ಕೆ ಕಾರ್ಯಕರ್ತರು ಅಡ್ಡಿಪಡಿಸಿ ಆಕ್ರೋಶ ವ್ಯಕ್ತಪಡಿಸಿದರು.

10 ವರ್ಷಗಳಿಂದ ಕಾಂಗ್ರೆಸ್ ಕಾರ್ಯಕರ್ತರ ತಾಲೂಕಿನಲ್ಲಿ ಕೇಳುವವರಿಲ್ಲದಾಗಿದೆ. ಕಾಂಗ್ರೆಸ್'ನಲ್ಲಿ ಸರಿಯಾದ ನಾಯಕನಿಲ್ಲ' ಎಂದ ಕಾರ್ಯಕರ್ತರು ವೀಕ್ಷಕರೆದುರೆ ಮಾರಾಮಾರಿ ನಡೆಸಿದರು. ಗಲಾಟೆಯಾದ ಕಾರಣ ಭಾಷಣ ಮಾಡುತ್ತಿದ್ದ ಸಚಿವ ಎ. ಮಂಜು ಸಭೆಯಿಂದ ಹೊರನೆಡೆದರು.