ಸೋಮಶೇಖರ್ ಅವರು ಗೂಡಿನ ವ್ಯಾಪಾರ ಮಾಡಿಕೊಂಡಿದ್ದು, ರೈತರ ಬಳಿ ಸಾಲಕ್ಕೆ ಗೂಡು ಖರೀದಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು.

ಕನಕಪುರ(ಫೆ.12): ಸಾಲಭಾದೆ ತಾಳಲಾರದೆ ಒಂದೇ ಕುಟುಂಬದ ಮೂವರು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಲಕ್ಷ್ಮಿ'ಪುರದಲ್ಲಿ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದಂಪತಿ ಪತಿ ಸೋಮಶೇಖರ್ (36), ಪತ್ನಿ ಸುಧಾ (27) ಹಾಗೂ ಮಗು ಪ್ರೀತಂ ಮೃತರು. ಮತ್ತೊಬ್ಬ ಪುತ್ರಿ ಮನೆಪಾಠ ಮುಗಿಸಿಕೊಂಡು ಬಂದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಸೋಮಶೇಖರ್ ಅವರು ಗೂಡಿನ ವ್ಯಾಪಾರ ಮಾಡಿಕೊಂಡಿದ್ದು, ರೈತರ ಬಳಿ ಸಾಲಕ್ಕೆ ಗೂಡು ಖರೀದಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದರು. ಗೂಡು ತೆಗೆದುಕೊಂಡಿದ್ದ ರೈತರಿಗೆ ಹಣ ನೀಡಿರಲಿಲ್ಲ. ಇಂದು ಬೆಳಿಗ್ಗೆ ಮನೆಯ ಬಳಿ ಹಣಕ್ಕಾಗಿ ರೈತರು ಬಂದು ಗಲಾಟೆ ಮಾಡಿದ್ದರು. ಸಂಜೆ ವೇಳೆಗೆ ಮೂವರು ಮೃತಪಟ್ಟಿದ್ದಾರೆ. ಕನಕಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.