Asianet Suvarna News Asianet Suvarna News

ಹೊಗೇನಕಲ್ ಜಲಪಾತವೇ ಜಲಾವೃತ

ಕೇರಳದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹೊಗೇನಕಲ್ ಜಲಪಾತವೇ ಜಲಾವೃತವಾಗಿದೆ. ಹೆಚ್ಚುತ್ತಿರುವ ನೀರಿನ ಹರಿವಿನಿಂದಾಗಿ ಜಲಪಾತ ವೀಕ್ಷಣೆಗೆ ತೆರಳುವ ಪಾಲಮಡು ಸೇತುವೆ ವೀಕ್ಷಣಾ ಗೋಪುರದೊಂದಿಗೆ ಜಲಪಾತವೂ ಕಾಣದಂತಾಗಿದೆ.

Hogenakkal Fall Submerged In Water
Author
Bengaluru, First Published Aug 13, 2018, 10:54 AM IST

ಚಾಮರಾಜನಗರ: ಕೇರಳದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹೊಗೇನಕಲ್ ಜಲಪಾತವೇ ಜಲಾವೃತವಾಗಿದೆ. ಹೆಚ್ಚುತ್ತಿರುವ ನೀರಿನ ಹರಿವಿನಿಂದಾಗಿ ಜಲಪಾತ ವೀಕ್ಷಣೆಗೆ ತೆರಳುವ ಪಾಲಮಡು ಸೇತುವೆ ವೀಕ್ಷಣಾ ಗೋಪುರದೊಂದಿಗೆ ಜಲಪಾತವೂ ಕಾಣದಂತಾಗಿದೆ.

ವಯನಾಡು, ಕೊಡಗು ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಪಿಲೆ ಮತ್ತು ಕಾವೇರಿ ಉಕ್ಕಿ ಹರಿಯುತ್ತಿದ್ದು, ಕೆಆರ್‌ಎಸ್‌ ಹಾಗೂ ಕಬಿನಿ ಡ್ಯಾಂಗಳಿಂದ ನದಿಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿಯ ಬಿಡಲಾಗುತ್ತಿದೆ. ಇದರಿಂದ ಹೊಗೇನಕಲ… ಜಲಪಾತ ಸಾಗರದಂತೆ ಗೋಚರವಾಗುತ್ತಿದೆ. ನೀರಿನ ಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಹೊಗೇನಕಲ… ಜಲಪಾತಕ್ಕೆ ತೆರಳುವ ಪ್ರವಾಸಿಗರನ್ನು ಕೊಕ್ಕರೆಹಳ್ಳ ಚೆಕ್‌ಪೋಸ್ಟ್‌ ಬಳಿಯೇ ನಿರ್ಬಂಧಿಸಲಾಗಿದೆ.

ಎರಡು ಬೋಟುಗಳು ಸಮುದ್ರಪಾಲು :  ಉಡುಪಿ: ಮಳೆ, ಗಾಳಿಯಿಂದಾಗಿ ಅರಬ್ಬೀಸಮುದ್ರ ತೀವ್ರ ಪ್ರಕ್ಷುಬ್ಧವಾಗಿದ್ದು, ಶನಿವಾರ ಮತ್ತು ಭಾನುವಾರ ಉಡುಪಿ ಜಿಲ್ಲೆಯ ಗಂಗೊಳ್ಳಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ನಡುವೆ ಮೀನುಗಾರಿಕೆ ನಡೆಸುತ್ತಿದ್ದ 2 ಬೋಟುಗಳು ಸಮುದ್ರದಲ್ಲಿ ಮುಳುಗಿ ಕೋಟ್ಯಾಂತರ ರುಪಾಯಿ ನಷ್ಟವಾಗಿದೆ. 

ಆದರೆ, ಬೋಟಿನಲ್ಲಿದ್ದ 16 ಮಂದಿ ಮೀನುಗಾರರನ್ನು ಬೇರೆ ಬೋಟಿನ ಮೀನುಗಾರು ರಕ್ಷಿಸಿ ದಡಕ್ಕೆ ಕರೆ ತಂದಿದ್ದಾರೆ. ಮಲ್ಪೆ ಬಂದರಿನಿಂದ ಶಿವಗಣೇಶ ಎಂಬ ಬೋಟು ಮೀನುಗಾರಿಕೆಗೆ ತೆರಳಿತ್ತು. ಸಂಜೆ ಭಟ್ಕಳದಿಂದ ಮಲ್ಪೆಯತ್ತ ಹಿಂದಕ್ಕೆ ಬರುವಾಗ ಭಾರೀ ಅಲೆಗಳ ಹೊಡೆತಕ್ಕೆ ಮಗುಚಿ ಮುಳುಗಿತು. ಈ ಸಂದರ್ಭದಲ್ಲಿ ಇತರೆ ಬೋಟಿನವರು ಮೀನುಗಾರರನ್ನು ರಕ್ಷಿಸಿದ್ದಾರೆ. 

ಭಾನುವಾರ ಬೆಳಗ್ಗೆ ಆಳಸಮುದ್ರ ಮೀನುಗಾರಿಕೆ ಮುಗಿಸಿ ಮಲ್ಪೆ ಬಂದರಿಗೆ ಮರಳುತ್ತಿದ್ದ ಪದ್ಮದಾಸ್‌ ಎಂಬ ಬೋಟು ಗಂಗೊಳ್ಳಿಯ ಬಳಿ ನೀರಿನಲ್ಲಿ ಮುಳುಗಿದೆ. ಅನತಿ ದೂರದಲ್ಲಿದ್ದ ಇನ್ನೊಂದು ಬೋಟಿನವರು ಸ್ಥಳಕ್ಕೆ ಧಾವಿಸಿ ಅದರಲ್ಲಿದ್ದ 8 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ.

Follow Us:
Download App:
  • android
  • ios