Asianet Suvarna News Asianet Suvarna News

ಪಾಕಿಸ್ತಾನ ಎದುರು ಭಾರತಕ್ಕೆ ಗೆಲುವು

ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಪರ ರಮಣ್ದೀಪ್ ಸಿಂಗ್ 8, 28ನೇ ನಿ., ತಲ್ವೀಂದರ್ ಸಿಂಗ್ 25ನೇ ನಿ., ಮಂದೀಪ್ ಸಿಂಗ್ 27, 59ನೇ ನಿ., ಹರ್ಮನ್ಪ್ರೀತ್ ಸಿಂಗ್ 36ನೇ ನಿಮಿಷದಲ್ಲಿ ಗೋಲುಗಳಿಸಿದರು. ಅತ್ತ ಪಾಕಿಸ್ತಾನದ ಪರ ಅಜಾಜ್ ಅಹ್ಮದ್ 41ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

Hockey World League Semi Final India humble Pakistan
  • Facebook
  • Twitter
  • Whatsapp

ಲಂಡನ್(ಜೂ.24): ಪ್ರತಿಭಾನ್ವಿತ ಮುನ್ಪಡೆ ಆಟಗಾರ ರಮಣ್‌ದೀಪ್ ಸಿಂಗ್ ಮತ್ತು ಮಂದೀಪ್ ಸಿಂಗ್ ಅವರ ಆಕರ್ಷಕ ಆಟದ ನೆರವಿನಿಂದ ಭಾರತ ತಂಡ, ಹಾಕಿ ವಿಶ್ವ ಲೀಗ್ ಸೆಮೀಸ್‌ನಲ್ಲಿನ 5 ಮತ್ತು 8ನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ 6-1 ಗೋಲುಗಳಿಂದ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದೆ.

ಶನಿವಾರ ನಡೆದ ಪಂದ್ಯದಲ್ಲಿ ಭಾರತದ ಪರ ರಮಣ್‌ದೀಪ್ ಸಿಂಗ್ 8, 28ನೇ ನಿ., ತಲ್ವೀಂದರ್ ಸಿಂಗ್ 25ನೇ ನಿ., ಮಂದೀಪ್ ಸಿಂಗ್ 27, 59ನೇ ನಿ., ಹರ್ಮನ್‌ಪ್ರೀತ್ ಸಿಂಗ್ 36ನೇ ನಿಮಿಷದಲ್ಲಿ ಗೋಲುಗಳಿಸಿದರು. ಅತ್ತ ಪಾಕಿಸ್ತಾನದ ಪರ ಅಜಾಜ್ ಅಹ್ಮದ್ 41ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಪಂದ್ಯದ ಆರಂಭದಿಂದಲೂ ಆಕ್ರಮಣಾಕಾರಿ ಆಟಕ್ಕೆ ಮುಂದಾದ ಭಾರತ ತಂಡ ಮೊದಲಾರ್ಧದ ಅವಧಿಯಲ್ಲಿ 4 ಗೋಲುಗಳಿಸಿ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತ್ತು. ಹಾಗೆ ದ್ವಿತೀಯಾರ್ಧದ ಅವಧಿಯಲ್ಲೂ ಎದುರಾಳಿ ಪಾಕಿಸ್ತಾನ ತಂಡದ ರಕ್ಷಣಾ ಕೋಟೆಯನ್ನು ಬೇಧಿಸುವಲ್ಲಿ ಯಶಸ್ವಿಯಾಗಿ 5 ಗೋಲುಗಳ ಅಂತರದಲ್ಲಿ ಪಂದ್ಯ ಜಯಿಸಿತು. 5 ಮತ್ತು 6ನೇ ಸ್ಥಾನಕ್ಕಾಗಿ ಕೆನಡಾ ಎದುರು ಭಾರತ ಭಾನುವಾರ ಮತ್ತೊಂದು ಪಂದ್ಯವನ್ನಾಡಲಿದೆ. ಹಾಗೆ ಪಾಕಿಸ್ತಾನ ಕೂಡ 7 ಮತ್ತು 8ನೇ ಸ್ಥಾನಕ್ಕಾಗಿ ಚೀನಾ ಎದುರು ಸೆಣಸಲಿದೆ.

Follow Us:
Download App:
  • android
  • ios