ವಯಸ್ಸಾದ ಕಾರಣ ಚುನಾವಣೆಯಿಂದ ನಿವೃತ್ತಿ

HM Revanna Says he will not contest next elections
Highlights

  • ಚನ್ನಪಟ್ಟಣದ ಮತದಾರರ ಕೃತಜ್ಞತೆ ಸಭೆಯಲ್ಲಿ ಮಾತು
  • ಚುನಾವಣೆ ಸ್ಪರ್ಧಿಸದಿದ್ದರೂ ಸಕ್ರಿಯ ರಾಜಕಾರಣದಲ್ಲಿ ಮುಂದುವರೆಯುತ್ತೇನೆ ಎಂದ ಪರಿಷತ್ ಸದಸ್ಯ

ಚನ್ನಪಟ್ಟಣ[ಜು.07]: ಹೆಚ್.ಎಂ. ರೇವಣ್ಣನವರು ನನಗೆ ವಯಸ್ಸಾಗಿದೆ ಸಂಘಟನೆ ಮಾಡುವುದಕ್ಕೆ ಕಷ್ಟ ಎಂದ ಕಾರಣ ಒಬ್ಬ ಸೂಕ್ತ ನಾಯಕನನ್ನ ಚನ್ನಪಟ್ಟಣಕ್ಕೆ ಗುರುತಿಸುತ್ತೇವೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದ್ದಾರೆ.

ಚನ್ನಪಟ್ಟಣದ ಮತದಾರರ ಕೃತಜ್ಞತೆ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣೆ ಸ್ಪರ್ಧಿಸದಿದ್ದರೂ ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುತ್ತಾರೆ ಎಂದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಪರಿಷತ್ ಸದಸ್ಯ ರೇವಣ್ಣ, ಕೊನೆಯವರೆಗೂ ರಾಜಕೀಯ ರಂಗದಲ್ಲಿ ಇರುತ್ತೇನೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ  ಕೊನೆ ಕ್ಷಣದ ಅಭ್ಯರ್ಥಿ ಅಯ್ಕೆಯಿಂದಾಗಿ ಕಾಂಗ್ರೆಸ್ ಪಕ್ಷ ಸೋಲು ಅನುಭವಿಸಿತು. ಈ ಹಿನ್ನೆಲೆಯಲ್ಲಿ ನನಗಲ್ಲದಿದ್ದರೂ ಬೇರೆಯವರಿಗಾದರೂ  ಈಗಿಂದಲೇ ಪಕ್ಷದ ಅಭ್ಯರ್ಥಿಯಾಗಿ ಗುರುತಿಸಬೇಕು ಎಂದರು.

ಕೊನೆಯ ಕೆಲವೇ ದಿನಗಳಲ್ಲಿ ಸ್ಪರ್ಧಿಸಿದ್ದರೂ ಕಾಂಗ್ರೆಸ್ ಪಕ್ಷಕ್ಕೆ 30 ಸಾವಿರಕ್ಕೂ ಹೆಚ್ಚು ಮತ ಲಭಿಸಿವೆ. ಮೊದಲೇ ಅಭ್ಯರ್ಥಿಯಾಗಿ ಅಯ್ಕೆ ಅಗಿದ್ದರೆ ಗೆಲುವು ನಿಶ್ಚಿತವಾಗುತ್ತಿತ್ತು. ಯುವಕರಿಗೆ ಅವಕಾಶ ಕೊಡಲಿ. ನನಗೆ ಈ ಬಾರಿ ಕ್ಷೇತ್ರದ ಜನ ಮತಕೊಟ್ಟಿರುವುದಕ್ಕೆ ಸಮಾಧಾನವಿದೆ ಎಂದು ತಿಳಿಸಿದರು.

[ಸಂಗ್ರಹ ಚಿತ್ರ]

 

loader