ಡಿ.1 ರಂದು ನಡೆಯುವ ವಿಶ್ವ ಏಡ್ಸ್ ದಿನಾಚರಣೆ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ಸಾಲಿನ ಅಕ್ಟೋಬರ್‌ವರೆಗೆ ಜಿಲ್ಲೆಯಲ್ಲಿ ಒಟ್ಟು 210 (ಶೇ.1.03) ಎಚ್‌ಐವಿ ಬಾಧಿತರು, 9 (ಶೇ.0.08) ಮಂದಿ ಎಚ್‌ಐವಿ ಪೀಡಿತ ಮಹಿಳೆಯರನ್ನು ಗುರುತಿಸಲಾಗಿದೆ.
ಉಡುಪಿ(ನ.29): ಜಿಲ್ಲೆಯಲ್ಲಿ ದಿನಕ್ಕೊಬ್ಬರಂತೆ, ಪ್ರತಿ ತಿಂಗಳು ಸರಾಸರಿ 31 ಮಂದಿ ಎಚ್ಐವಿ ಸೋಂಕಿತರು ಪತ್ತೆಯಾಗುತ್ತಿದ್ದು, ಅವರಲ್ಲಿ ಒಬ್ಬರು ಗರ್ಭಿಣಿಯರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
ಡಿ.1 ರಂದು ನಡೆಯುವ ವಿಶ್ವ ಏಡ್ಸ್ ದಿನಾಚರಣೆ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಸಕ್ತ ಸಾಲಿನ ಅಕ್ಟೋಬರ್ವರೆಗೆ ಜಿಲ್ಲೆಯಲ್ಲಿ ಒಟ್ಟು 210 (ಶೇ.1.03) ಎಚ್ಐವಿ ಬಾಧಿತರು, 9 (ಶೇ.0.08) ಮಂದಿ ಎಚ್ಐವಿ ಪೀಡಿತ ಮಹಿಳೆಯರನ್ನು ಗುರುತಿಸಲಾಗಿದೆ. ಎಚ್ಐವಿ ಪೀಡಿತರ ಪ್ರಮಾಣ ರಾಜ್ಯದಲ್ಲಿ ಸರಾಸರಿ ಶೇ.1.12 ಇದ್ದು, ಉಡುಪಿ ಜಿಲ್ಲೆಯ ಸರಾಸರಿ ಶೇ 1.04 ಇದೆ. 2008ರಿಂದ ಜಿಲ್ಲೆಯಲ್ಲಿ ಒಟ್ಟು 4925 ಎಚ್ಐವಿ ಸೋಂಕಿತರು ಪತ್ತೆಯಾಗಿದ್ದು, ಅವರಲ್ಲಿ 748 ಮಂದಿ ಮೃತರಾಗಿದ್ದಾರೆ ಎಂದರು.
ಜಿಲ್ಲೆಯಲ್ಲಿ ಎಚ್ಐವಿ ಪ್ರಮಾಣವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಡಿ.1ರಂದು ಎಲ್ಲ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಸಲಾಗುವುದು. 20 ಕಡೆ ಯಕ್ಷಗಾನದ ಮೂಲಕ ಜಾಗೃತಿಯನ್ನೂ ನಡೆಸಲಾಗುವುದು. ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಎಚ್ಐವಿ ಸೋಂಕಿತರಿಗೆ ಆದ್ಯತೆ ಮೇಲೆ ನಿವೇಶನ, ಖಾಸಗಿ ಬಸ್ಗಳಲ್ಲಿ ಪ್ರಯಾಣಕ್ಕೆ ಶೇ.50ರಷ್ಟು ರಿಯಾಯಿತಿ ಬಸ್ಪಾಸ್ಗಳನ್ನು ನೀಡಲಾಗುತ್ತಿದ್ದು, ಎಚ್ಐವಿ ಸೋಂಕಿತ 249 ಮಕ್ಕಳಿಗೆ ಪೌಷ್ಟಿಕ ಆಹಾರ, ವಿದ್ಯಾರ್ಥಿವೇತನ, ಮಾಸಿಕ ವೇತನ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರೋಹಣಿ ಹೇಳಿದರು.
