ಭದ್ರತಾ ಪಡೆಗಳ ವಶದಲ್ಲಿದ್ದ ದೂರವಾಣಿಯನ್ನು ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಮೂಲತಃ ಕಪ್ಪುಬಣ್ಣದ ಟೆಲಿಫೋನ್ ಗೆ ಕೆಂಪುಬಣ್ಣವನ್ನು ಬಳಿದು, ಅದರ ಮೇಲೆ  ಹಿಟ್ಲರ್ ನ ಹೆಸರನ್ನೂ ಕೂಡ ಬರೆಯಲಾಗಿತ್ತು.

ವಾಷಿಂಗ್ಟನ್ (ಫೆ.19): 2ನೇ ವಿಶ್ವಯುದ್ಧದ ಸಂದರ್ಭದಲ್ಲಿ ಸರ್ವಾಧಿಕಾರಿ ಹಿಟ್ಲರ್ ತನ್ನ ವಿಧ್ವಂಸಕ ಆದೇಶಗಳನ್ನು ನೀಡಿದ್ದ, ವೈಯಕ್ತಿಕ ದೂರವಾಣಿಯನ್ನು ಅಮೆರಿಕದ ಅಧಿಕಾರಿಗಳು ಹರಾಜು ಹಾಕಿದ್ದಾರೆ.

1945ರಲ್ಲಿ ಹಿಟ್ಲರ್ ಪತನದ ಸಂದರ್ಭದಲ್ಲಿ, ಆತ ಅವಿತಿದ್ದ ಬಂಕರ್'ನಿಂದ ಭದ್ರತಾ ಪಡೆಗಳು ಈ ದೂರವಾಣಿಯನ್ನು ವಶಪಡಿಸಿಕೊಂಡಿದ್ದವು.

ಭದ್ರತಾ ಪಡೆಗಳ ವಶದಲ್ಲಿದ್ದ ದೂರವಾಣಿಯನ್ನು ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಮೂಲತಃ ಕಪ್ಪುಬಣ್ಣದ ಟೆಲಿಫೋನ್ ಗೆ ಕೆಂಪುಬಣ್ಣವನ್ನು ಬಳಿದು, ಅದರ ಮೇಲೆ ಹಿಟ್ಲರ್ ನ ಹೆಸರನ್ನೂ ಕೂಡ ಬರೆಯಲಾಗಿತ್ತು.

ಈ ಟೆಲಿಫೋನ್ ಸುಮಾರು 2 ಲಕ್ಷ ಡಾಲರ್ ನಿಂದ 3 ಲಕ್ಷ ಡಾಲರ್ ಗಳಿಗೆ ಹರಾಜಾಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.