Asianet Suvarna News Asianet Suvarna News

ಹಿರೇಮಠ ರಾಜಕಾರಣಕ್ಕೆ: ಲೋಕಸಭೆ ಚುನಾವಣೆಗೆ ಸ್ಪರ್ಧೆ

ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಕಾನೂನು ಹೋರಾಟ ನಡೆಸಿದ್ದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಅವರು ರಾಜಕೀಯಕ್ಕೆ ಧುಮುಕುವುದು ನಿಶ್ಚಿತವಾಗಿದ್ದು, ಜನ ಸಂಗ್ರಾಮ ಪರಿಷತ್ ಮಹಾಮೈತ್ರಿ ನೇತೃತ್ವದಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

Hiremath to Contest Loksabha Election

ಧಾರವಾಡ: ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ ಸೇರಿದಂತೆ ಹಲವು ವಿಚಾರಗಳಲ್ಲಿ ಕಾನೂನು ಹೋರಾಟ ನಡೆಸಿದ್ದ ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್. ಹಿರೇಮಠ ಅವರು ರಾಜಕೀಯಕ್ಕೆ ಧುಮುಕುವುದು ನಿಶ್ಚಿತವಾಗಿದ್ದು, ಜನ ಸಂಗ್ರಾಮ ಪರಿಷತ್ ಮಹಾಮೈತ್ರಿ ನೇತೃತ್ವದಲ್ಲಿ ಮುಂಬರುವ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮುಂದಿನ ವಿಧಾನಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಜನಸಂಗ್ರಾಮ ಪರಿಷತ್‌ನ ರಾಜ್ಯ ಮಟ್ಟದ ಸಮಿತಿಯು ರಾಯಚೂರಿನಲ್ಲಿ ನ.4, 5ರಂದು ಮತದಾರರ ಜಾಗೃತಿ ಆಂದೋಲನದ ಭಾಗವಾಗಿ ಪರ್ಯಾಯ ರಾಜಕಾರಣ ಚಿಂತನಾ ಶಿಬಿರ ಆಯೋಜಿಸಲಾಗಿದೆ ಎಂದರು.

2018ರ ವಿಧಾನಸಭೆ ಚುನಾವಣೆಗೆ ಜನಸಂಗ್ರಾಮ ಪರಿಷತ್ತಿನ ಮಹಾಮೈತ್ರಿ ನೇತೃತ್ವದಲ್ಲಿ ಆಯ್ದ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಾನು ವಿಧಾನಸಭೆಗೆ ಸ್ಪರ್ಧಿಸುವುದಿಲ್ಲ. ಆದರೆ, 2019ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದು ಖಚಿತ. ನಮ್ಮೊಂದಿಗೆ ಸ್ವರಾಜ್ ಇಂಡಿಯಾ, ಕರ್ನಾಟಕ ಶಕ್ತಿ ಸಂಘಟನೆ, ಆಮ್ ಆದ್ಮಿ ಪಾರ್ಟಿ, ಸಿಪಿಐ, ಸಿಪಿಎಂ, ಎಸ್‌ಯುಸಿಐ ಪಕ್ಷಗಳು ಕೈಜೋಡಿಸಲಿವೆ ಎಂದು ಸ್ಪಷ್ಟ ಪಡಿಸಿದರು.

ಪ್ರಧಾನಿ ಮೋದಿ ಒಬ್ಬ ನಟ. ಪ್ರಜೆಗಳೇ ಮಾಲೀಕರಾದ ಭಾರತ ದೇಶದಲ್ಲಿ ಜನಹಿತ ಕೇಂದ್ರಿತ ಆಡಳಿತ ಮರೆತಿದ್ದಾರೆ. ಲವ್ ಜಿಹಾದ್, ಮಾಂಸ ಸೇವನೆಯಂಥ ವಿಷಯಗಳತ್ತ ಜನರ ಗಮನ ತಿರುಗಿಸಲಾಗುತ್ತಿದೆ. ಇತ್ತ ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡ ವಿಫಲವಾಗಿದೆ ಎಂದು ಹಿರೇಮಠ ಟೀಕಿಸಿದರು.

Follow Us:
Download App:
  • android
  • ios