ಹಿಂದುಸ್ತಾನ ಎಂಬುದು ಹಿಂದುಗಳ ದೇಶ. ಹಾಗೆಂದಾಕ್ಷಣ ಈ ದೇಶ ಇತರರಿಗೆ ಸೇರಿಲ್ಲ ಎಂದು ಅರ್ಥವಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ ಭಾಗವತ್ ತಿಳಿಸಿದ್ದಾರೆ.

ಇಂದೋರ್(ಅ.29): ಹಿಂದುಸ್ತಾನ ಎಂಬುದು ಹಿಂದುಗಳ ದೇಶ. ಹಾಗೆಂದಾಕ್ಷಣ ಈ ದೇಶ ಇತರರಿಗೆ ಸೇರಿಲ್ಲ ಎಂದು ಅರ್ಥವಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ಮುಖ್ಯಸ್ಥ ಮೋಹನ ಭಾಗವತ್ ತಿಳಿಸಿದ್ದಾರೆ.

ಜರ್ಮನಿ ಯಾರದ್ದು? ಜರ್ಮನ್ನರ ದೇಶ ಅದು. ಬ್ರಿಟನ್ ಎಂಬುದು ಬ್ರಿಟಿಷರದ್ದು. ಅಮೆರಿಕ ಎಂಬುದು ಅಮೆರಿಕನ್ನರದ್ದು. ಅದೇ ರೀತಿ ಹಿಂದುಸ್ತಾನ ಎಂಬುದು ಹಿಂದುಗಳ ದೇಶ. ಆದರೆ, ಹಿಂದುಸ್ತಾನ ಇತರರಿಗೆ ಸೇರಿದ ದೇಶವಲ್ಲ ಎಂದು ಅರ್ಥವಲ್ಲ ಎಂದು ಯುವ ಆರ್‌'ಎಸ್‌'ಎಸ್ ಸ್ವಯಂಸೇವಕರ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಭಾರತ ಮಾತೆಗೆ ಜನಿಸಿದ, ಭಾರತೀಯ ಪೂರ್ವಜರಿಗೆ ಹುಟ್ಟಿದ ಹಾಗೂ ಭಾರತೀಯ ಸಂಸ್ಕೃತಿ ಪ್ರಕಾರವೇ ಬದುಕುವ ಎಲ್ಲರೂ ಹಿಂದು ಪದದ ವ್ಯಾಪ್ತಿಗೆ ಬರುತ್ತಾರೆ ಎಂದು ಅವರು ವ್ಯಾಖ್ಯಾನಿಸಿದರು.