ಯಾರೆಲ್ಲಾ 2019ರಲ್ಲಿ ಕಾಂಗ್ರೆಸ್ ಮತ್ತೆ  ಅಧಿಕಾರಕ್ಕೆ ಬರಬೇಕೆಂದುಕೊಳ್ಳುತ್ತಿದ್ದೀರೋ ಅವರೆಲ್ಲಾ ಈ ವಿಡಿಯೋವನ್ನು ತಪ್ಪದೇ ನೋಡಿ. ಸರ್ಕಾರ ರಚನೆಯಾಗಿ ಇನ್ನೂ ಒಂದು ತಿಂಗಳು ಕೂಡ ಕಳೆದಿಲ್ಲ. ಮಸ್ಲಿಮರು ಹಿಂದುಗಳನ್ನು ಥಳಿಸುತ್ತಿದ್ದಾರೆ ಎಂಬಂತಹ ಸಂದೇಶದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದು ಸತ್ಯವೇ?  

ಯಾರೆಲ್ಲಾ 2019ರಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಬೇಕೆಂದುಕೊಳ್ಳುತ್ತಿದ್ದೀರೋ ಅವರೆಲ್ಲಾ ಈ ವಿಡಿಯೋವನ್ನು ತಪ್ಪದೇ ನೋಡಿ. ಸರ್ಕಾರ ರಚನೆಯಾಗಿ ಇನ್ನೂ ಒಂದು ತಿಂಗಳು ಕೂಡ ಕಳೆದಿಲ್ಲ. ಮಸ್ಲಿಮರು ಹಿಂದುಗಳನ್ನು ಥಳಿಸುತ್ತಿದ್ದಾರೆ ಎಂಬಂತಹ ಸಂದೇಶದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ, ಇದರ ಸತ್ಯಾಸತ್ಯತೆ ಇಲ್ಲಿದೆ...

Add Asianetnews Kannada as a Preferred SourcegooglePreferred

ವಿಡಿಯೋದಲ್ಲಿ ಬೈಕ್ ಸವಾರನೊಬ್ಬನನ್ನು ಗುಂಪೊಂದು ಥಳಿಸುತ್ತಿ ರುವ ಅಸ್ಪಷ್ಟ ದೃಶ್ಯವಿದೆ. ಇದನ್ನು ಸೊಷಿಯಲ್ ಮೀಡಿಯಾ ದಲ್ಲಿ ಹಾಕಿ ಕರ್ನಾಟಕದಲ್ಲಿ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಸರ್ಕಾರ ರಚನೆಯಾದಾಗಿನಿಂದ ಈ ರೀತಿ ಘಟನೆಗಳು ನಡೆಯುತ್ತಿವೆ ಎಂದು ಆರೋಪಿಸಿ ಅಡಿಬರಹ ವನ್ನು ಬರೆಯಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ನಿಜಕ್ಕೂ ಕರ್ನಾಟಕದಲ್ಲಿ ಕಾಂಗ್ರೆಸ್-ಜೈಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ರೀತಿಯ ಹಿಂಸಾಚಾರದ ಘಟನೆ ನಡೆದಿತ್ತೇ, ಮುಸ್ಲಿಮರು ಹಿಂದುಗಳನ್ನು ಥಳಿಸಿದ್ದರೇ ಎಂದು ಆಲ್ಟ್ ನ್ಯೂಸ್ ತನಿಖೆಗೆ ಮುಂದಾದಾಗ ಈ ವಿಡಿಯೋ ಹಿಂದಿನ ಅಸಲಿ ಕತೆ ಬಯಲಾಗಿದೆ. 

 ಸಾಮಾಜಿಕ ಮಾಧ್ಯಮಗಳಲ್ಲಿ ಕರ್ನಾಟಕದಲ್ಲಿ ನಡೆದ ಘಟನೆ ಎಂದು ಬಿಂಬಿತವಾಗಿರುವ ವಿಡಿಯೋ ವಾಸ್ತವದಲ್ಲಿ ಕರ್ನಾಟಕದ್ದೇ ಅಲ್ಲ. ಆಲ್ಟ್ ನ್ಯೂಸ್ ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹುಡುಕಹೊರಟಾಗ ಇದು ಜಾರ್ಖಂಡ್‌ನ ರಾಂಚಿಯ ವಿಡಿಯೋ ಎಂಬುದು ಪತ್ತೆಯಾಗಿದೆ. ಎನ್‌ಡಿಎ ಸರ್ಕಾರ 4 ವರ್ಷ ಪೂರೈಸಿದ ಹಿನ್ನಲೆ ಕೈಗೊಂಡಿದ್ದ ಬೈಕ್ ರ್ಯಾಲಿ ಸಂದರ್ಭದಲ್ಲಿ ಭಾರತೀಯ ಜನತಾ ಯುವ ಮೋರ್ಚಾದ ಸದಸ್ಯನೊಬ್ಬ ಪ್ರಚೋದನಾಕಾರಿ ಘೋಷಣೆ ಕೂಗಿದ್ದ. 

ಈ ವೇಳೆ ಸಾರ್ವಜನಿಕರು ಮತ್ತು ಯುವ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿ ವಾಗ್ವಾದ ಮತ್ತು ಕಲ್ಲು ತೂರಾಟ ನಡೆದಿತ್ತು. ಕೊನೆಗೆ ಪೊಲೀಸರ ಮಧ್ಯಸ್ಥಿಕೆಯಲ್ಲಿ ವಾಗ್ವಾದ ತೆರ ಕಂಡಿತ್ತು. ಈ ಘಟನೆಯನ್ನು ಕರ್ನಾಟಕದಲ್ಲಿ ನಡೆದ ಕೋಮು ಸಂಘರ್ಷ ಎಂದು ಬಿಂಬಿಸಿ ಸೋಷಿಯಲ್ ಮೀಡಿಯಾದಲ್ಲಿ ಹರಡಲಾಗಿದೆ.