Asianet Suvarna News Asianet Suvarna News

ಪಾಕ್ ಚುನಾವಣೆಯಲ್ಲಿ ಹಿಂದೂ ಮಹಿಳೆ ಸ್ಪರ್ಧೆ: ಇತಿಹಾಸ ಬರೆದ ಸುನೀತಾ!

ಪಾಕಿಸ್ತಾನ ಚುನಾವಣೆಯಲ್ಲಿ ಹಿಂದೂ ಮಹಿಳೆ ಸ್ಪರ್ಧೆ

ಇತಿಹಾಸ ನಿರ್ಮಿಸಿದ ಸುನೀತಾ ಪರ್ಮಾರ್

ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಮೊದಲ ಹಿಂದೂ ಮಹಿಳೆ

ಸಿಂಧ್ ವಿಧಾನಸಭಾ ಕ್ಷೇತ್ರದಿಂದ ಸುನೀತಾ ಪರ್ಮಾರ್ ಸ್ಪರ್ಧೆ 

Hindu Woman Contests Election In Pakistan, Creates History

ಕರಾಚಿ(ಜು.7): ಪಾಕಿಸ್ತಾನದಲ್ಲಿ ಇದೇ ಜುಲೈ 25ರಂದು ಸಂಸದೀಯ ಮತ್ತು ಪ್ರಾಂತೀಯ ಸಭಾ ಚುನಾವಣೆ ನಡೆಯಲಿದೆ. ಇದರಲ್ಲೇನು ವಿಶೇಷ ಅಂತೀರಾ?. ಈ ಬಾರಿ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಸಂಸದೀಯ ಮತ್ತು ಪ್ರಾಂತೀಯ ಸಭಾ ಚುನಾವಣೆ ಐತಿಹಾಸಿಕವಾಗಿರಲಿದೆ. ಕಾರಣ ಈ ಬಾರಿಯ ಚುನಾವಣೆಯಲ್ಲಿ ಹಿಂದೂ ಮಹಿಳೆಯೊಬ್ಬರು ಇದೇ ಮೊದಲ ಬಾರಿಗೆ ಕಣಕ್ಕಿಳಿದು ಇತಿಹಾಸ ನಿರ್ಮಿಸಿದ್ದಾರೆ.

ಕಟ್ಟಾ ಇಸ್ಲಾಂ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ ಹಿಂದೂ ಮಹಿಳೆ ಸುನೀತಾ ಪರ್ಮಾರ್ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಮೂಲಭೂತವಾದಿಗಳಿಗೆ ನುಂಗಲಾರದ ತುತ್ತಾಗಿದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದಿಂದ ಸುನೀತಾ ಪರ್ಮಾರ್ ಕಣಕ್ಕಿಳಿದಿದ್ದಾರೆ. ಪಾಕಿಸ್ತಾನದ ಚುನಾವಣೆ ಇತಿಹಾಸದಲ್ಲಿ ಅಲ್ಪಸಂಖ್ಯಾತ ಸಮುದಾಯದ ಹಿಂದೂ ಮಹಿಳೆಯೋರ್ವಳು ಕಣಕ್ಕಿಳಿದಿರುವುದು ಇದೇ ಮೊದಲು.

ಸಿಂಧ್ ಪ್ರಾಂತ್ಯದ ತಾರ್ಪಾಕಾರ್ ಜಿಲ್ಲೆ ಅತೀ ಹೆಚ್ಚು ಹಿಂದೂಗಳು ನೆಲೆಸಿರುವ ಪ್ರದೇಶವಾಗಿದ್ದು, ಸುನೀತಾ ಸಿಂಧ್ ವಿಧಾನಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಸುನೀತಾ ಪರ್ಮಾರ್, 21ನೇ ಶತಮಾನದಲ್ಲೂ ಮಹಿಳೆಯರು ಮೂಲಭೂತ ಆರೋಗ್ಯ ಸೌಲಭ್ಯ ಹಾಗೂ ಶಿಕ್ಷಣಕ್ಕಾಗಿ ಹೋರಾಡಬೇಕಿರುವುದು ದುರದೃಷ್ಟಕರ. ಒಂದು ವೇಳೆ ತಾವು ಚುನಾವಣೆಯಲ್ಲಿ ಗೆದ್ದರೆ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ.

Follow Us:
Download App:
  • android
  • ios