ಅಬುಧಾಬಿಯಲ್ಲಿ ಮೊದಲ ದೇಗುಲ : 14 ಎಕರೆಯಲ್ಲಿ ನಿರ್ಮಾಣ

First Published 25, Jul 2018, 12:27 PM IST
Hindu stone temple to be built in Abu Dhabi
Highlights

ಅಬುದಾಬಿ-ದುಬೈ ಹೆದ್ದಾರಿಯ ಬಳಿ 14 ಎಕರೆ ಪ್ರದೇಶದಲ್ಲಿ 7 ಅಂತಸ್ತಿನ ದೇವಸ್ಥಾನ ತಲೆ ಎತ್ತಲಿದೆ. 2020ರ ವೇಳೆಗೆ ಈ ದೇವಾಲಯವು ಉದ್ಘಾಟನೆಗೊಳ್ಳಲಿದೆ. 

ದುಬೈ: ಅರಬ್ ಸಂಯುಕ್ತ ರಾಷ್ಟ್ರಗಳ ರಾಜಧಾನಿ ಅಬುಧಾಬಿಯಲ್ಲಿ 2020 ರ ವೇಳೆಗೆ ಮೊದಲ ಹಿಂದೂ ದೇವಾಲಯ ಉದ್ಘಾಟನೆಗೊಳ್ಳಲಿದೆ. ದೇಗುಲ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯೋಜನೆಗೆ ಸ್ಥಳೀಯ ಆಡಳಿತ ಅನುಮತಿ ನೀಡುವುದ ರೊಂದಿಗೆ, ನಿರ್ಮಾಣ ಕಾರ್ಯಕ್ಕೆ ಅಂತಿಮ ಅನುಮೋದನೆ ಸಿಕ್ಕಂತಾಗಿದೆ. 

ಅಬುದಾಬಿ-ದುಬೈ ಹೆದ್ದಾರಿಯ ಬಳಿ 14 ಎಕರೆ ಪ್ರದೇಶದಲ್ಲಿ 7 ಅಂತಸ್ತಿನ ದೇವಸ್ಥಾನ ತಲೆ ಎತ್ತಲಿದೆ. ಇದರ ಕಲ್ಲುಗಳನ್ನು ಭಾರತದ ಕಲಾವಿದರು ಕೆತ್ತಲಿ ದ್ದು, ಬಳಿಕ ಅಬುದಾಬಿಗೆ ತಂದು ಜೋಡಿಸಲಾಗುತ್ತದೆ. 2015 ರಲ್ಲಿ ಪ್ರಧಾನಿ ಮೋದಿ ಯುಎಇಗೆ ಭೇಟಿ ನೀಡಿದ್ದಾಗ ದೇವಸ್ಥಾನಕ್ಕೆ ಅನುಮತಿ ಸಿಕ್ಕಿತ್ತು. 

ಸ್ವಾಮಿ ನಾರೇಯಣ ಸಂಸ್ಥೆ ದೇವಾಲಯದ ನಿರ್ಮಾಣದ ಉಸ್ತುವಾರಿಯನ್ನು ವಹಿಸಿಕೊಂಡಿದೆ. ಪ್ರಮುಖವಾಗಿ ಸ್ವಾಮಿ ನಾರಾಯಣ ಹಾಗೂ  ವಿವಿಧ ದೇವರುಗಳನ್ನು ಈ 14 ಎಕರೆ ಪ್ರದೇಶದಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ. 

loader