ನ್ಯೂಯಾರ್ಕ್[ಜು.22]: ನ್ಯೂಯಾರ್ಕ್‌ನ ಗ್ಲೆನ್‌ ಓಕ್ಸ್‌ ಬಳಿಯಿರುವ ಶಿವ ಶಕ್ತಿ ಪೀಠದ ಬಳಿ ಹಿಂದೂ ಅರ್ಚಕ ಸ್ವಾಮಿ ಹರೀಶ್‌ ಚಂದೇರ್‌ ಪುರಿ 52 ವರ್ಷದ ಅಮೆರಿಕಾದ ಪ್ರಜೆಯೊಬ್ಬರು ದಾಳಿ ನಡೆಸಿದ್ದಾರೆ.

ವಾರದ ಹಿಂದೆ ಜುಲೈ 1 ರಂದು ನಡೆದ ಈ ಘಟನೆಯಲ್ಲಿ  ಈ ಘಟನೆ ನಡೆದಿದ್ದು, ಅರ್ಚಕರಿಗೆ ಪರಚಿದ ಗಾಯಗಳಾಗಿವೆ. ಸದ್ಯ ಅವರನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜನಾಂಗೀಯ ದ್ವೇಷದಿಂದ ಈ ದಾಳಿ ನಡೆದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 

ಆರೋಪಿ ಸೆರ್ಗಿಯೊ ಗೌವಿಯಾರನ್ನು ಪೊಲೀಸರು ಬಂಧಿಸಿದ್ದಾರೆ. ದಾಳಿ ನಡೆಸುವ ವೇಳೆ ಆರೋಪಿ 'ಇದು ನನ್ನ ನೆರೆಹೊರೆ' ಎಂದು ಜೋರಾಗಿ ಕಿರುಚುತ್ತಿದ್ದ ಎಂದು ಸ್ಥಳೀಯ ನಿವಾಸಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ದಾಳಿಗೆ ಹಿಂದೆ ಟ್ರಂಪ್‌ ಟ್ವೀಟ್‌ ಕಾರಣವೇ?: 

ಕೆಲ ದಿನಗಳ ಹಿಂದಷ್ಟೇ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ವೀಟ್‌ ಒಂದನ್ನು ಮಾಡುತ್ತಾ 'ನಮ್ಮ ದೇಶದ ಮುಕ್ತ, ಸ್ವಚ್ಛ ಹಾಗೂ ಯಶಸ್ವಿಯಾಗಿದೆ. ಒಂದು ವೇಳೆ ನಮ್ಮ ರಾಷ್ಟ್ರವನ್ನು ಕಂಡು ನಿಮಗೆ ಆಗದಿದ್ದರೆ, ಅಸಂತುಷ್ಟರಾಗಿದ್ದರೆ ಈ ಕೂಡಲೇ ನಿಮ್ಮ ಮೂಲಸ್ಥಾನಕ್ಕೆ ಹಿಂದಿರುಗಿ' ಎಂದು ಡೆಮಾಕ್ರೆಟಿಕ್‌ ಸಂಸದರಾದ ಸೊಮಾಲಿ ಮೂಲದ ಇಲ್ಹನ್‌ ಒಮರ್‌ ಸೇರಿದಂತೆ ನಾಲ್ವರು ವಿದೇಶಿ ಮೂಲದ ಸಂಸದರಿಗೆ  ಒತ್ತಾಯಿಸಿದ್ದರು. ಇದರ ಬೆನ್ನಲ್ಲೇ ಅರ್ಚಕರ ಮೇಲೆ ಈ ದಾಳಿ ನಡೆದಿದ್ದು ಹಲವಾರು ಚರ್ಚೆ ಹುಟ್ಟು ಹಾಕಿದೆ. ಅಲ್ಲದೇ ಜನಾಂಗೀಯ ದ್ವೇಷದ ಕಿಚ್ಚು ಹೊತ್ತಿರುವ ಆತಂಕ ಮೂಡಿಸಿದೆ.