ಹಿಂದೂ ವಿದ್ಯಾರ್ಥಿಗಳು ಹೆಚ್ಚಿರುವ ಶಾಲೆಗಳಲ್ಲಿ ಕ್ರಿಸ್ಮಸ್ ಆಚರಿಸದಂತೆ ಹಿಂದೂ ಸಂಘಟನೆಯೊಂದು, ಉತ್ತರ ಪ್ರದೇಶದಲ್ಲಿ ಕ್ರೈಸ್ತ ಸಂಸ್ಥೆಗಳ ಆಡಳಿತ ಹೊಂದಿರುವ ಶಾಲೆಗಳಿಗೆ ಸೂಚಿಸಿದೆ.

ಲಖನೌ (ಡಿ.18): ಹಿಂದೂ ವಿದ್ಯಾರ್ಥಿಗಳು ಹೆಚ್ಚಿರುವ ಶಾಲೆಗಳಲ್ಲಿ ಕ್ರಿಸ್ಮಸ್ ಆಚರಿಸದಂತೆ ಹಿಂದೂ ಸಂಘಟನೆಯೊಂದು, ರಾಜ್ಯದಲ್ಲಿ ಕ್ರೈಸ್ತ ಸಂಸ್ಥೆಗಳ ಆಡಳಿತ ಹೊಂದಿರುವ ಶಾಲೆಗಳಿಗೆ ಸೂಚಿಸಿದೆ.

ಸಿಎಂ ಯೋಗಿ ಅವರ ಹಿಂದೂ ಯುವವಾಹಿನಿ ಜೊತೆ ನಂಟಿರುವ ಹಿಂದೂ ಜಾಗರಣ್ ಮಂಚ್ ಎಂಬ ಸಂಘಟನೆ ಇಂಥದ್ದೊಂದು ಸೂಚನೆ ನೀಡಿದೆ. ಕ್ರಿಸ್ಮಸ್ ವೇಳೆ ಶಾಲೆಗೆ ಆಟಿಕೆ ತಂದು ಹಬ್ಬ ಆಚರಿಸುವಂತೆ ಶಾಲಾ ಆಡಳಿತ ಮಂಡಳಿಗಳು ಸೂಚಿಸಿದ್ದವು.

ಇದು ಮತಾಂತರರ ಆರಂಭದ ಹಂತ. ಹೀಗಾಗಿ ಇಂಥ ಸೂಚನೆ ಅನಿವಾರ್ಯವಾಗಿತ್ತು ಎಂದು ಸಂಘಟನೆಯ ಅಧ್ಯಕ್ಷ ಸೋನು ಸವಿತಾ ಹೇಳಿದ್ದಾರೆ.