Asianet Suvarna News Asianet Suvarna News

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹೋಟೆಲ್ ಇನ್ಮುಂದೆ ಸಾರ್ವಜನಿಕ ಶೌಚಾಲಯ

ದಾವೂದ್ ಇಬ್ರಾಹಿಂ ಭಾರತದಲ್ಲಿ ನೆಲೆಸಿದ್ದ ಸಂದರ್ಭದಲ್ಲಿ  ಹೋಟೆಲ್ ಬಳಕೆ ಮಾಡಲಾಗುತ್ತಿತ್ತು. ದಾವೂದ್'ನ ಎಲ್ಲಾ ಬೆಲೆಬಾಳುವ ಸ್ವತ್ತುಗಳನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆದಿತ್ತು. ಈ ಸ್ವತ್ತುಗಳನ್ನು ನಾಳೆ ಹರಾಜು ನಡೆಸಲು ಸರ್ಕಾರ ನಿರ್ಧರಿಸಿದೆ.

Hindu leader eyes Dawoods eatery to build public toilet

ಮುಂಬೈ(.13): ಜಾಗತಿಕ ಉಗ್ರ ಭಾರತದ ಮೋಸ್ಟ್ ವಾಂಟೆಡ್ ಟೆರರಿಸ್ಟ್ ದಾವುದ್ ಇಬ್ರಾಹಿಂ ಒಡೆತನದ ಹೋಟೆಲ್ ಇನ್ನು ಕೆಲವೇ ದಿನಗಳಲ್ಲಿ ಸಾರ್ವಜನಿಕ ಶೌಚಾಲಯವಾಗಿ ಪರಿವರ್ತನೆಯಾಗಲಿದೆ.

ಮುಂಬೈ'ನ ಭಿಂಡಿ ಬಜಾರನಲ್ಲಿರುವ  'ದಿಲ್ಲಿ ಝೈಕಾ’ ಹೋಟೆಲ್ ರೌನಕ್ ಅಫ್ರೋಜ್’ ಕಟ್ಟಡವನ್ನು ಹರಾಜು ಮಾಡಲಾಗುತ್ತಿದೆ. ಹರಾಜಾಗುತ್ತಿರುವ ಈ ಹೋಟೆಲ್'ಅನ್ನು ಹಿಂದೂ ಮಹಾಸಭಾ ಖರೀದಿಸಲು ನಿರ್ಧರಿಸಿದ್ದು, ಕಟ್ಟಡವನ್ನು ಸಾರ್ವಜನಿಕ ಶೌಚಾಲಯವಾಗು ಪರಿವರ್ತಿಸಲು ನಿರ್ಧರಿಸಿದೆ.

ನಾಳೆ ಹರಾಜು ಪ್ರಕ್ರಿಯೆ ನಡೆಯಲಿದ್ದು, ಕಟ್ಟಡವನ್ನು ಅಖಿಲ ಭಾರತ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಸಾರ್ವಜನಿಕ ಶೌಚಾಲಯವನ್ನಾಗಿ ಮಾರ್ಪಾಡು ಮಾಡಲು ತೀರ್ಮಾನಿಸಿದ್ದಾರೆ. ನಂತರ ಇದನ್ನು ಸಾರ್ವಜನಿಕರು ಉಚಿತವಾಗಿ ಬಳಸಬಹುದು. ಈ ಹಿಂದೆ ಹಿಂದೂ ಮಹಾಸಭಾ 2015ರಲ್ಲಿ  ದಾವೂದ್ ಇಬ್ರಾಹಿಂ ಬಳಸುತ್ತಿದ್ದ ಹುಂಡೈ ಆಕ್ಸೆಂಟ್‌ ಕಾರನ್ನು 32 ಸಾವಿರ ರೂ.ಗೆ ಖರೀದಿಸಿ ಸುಟ್ಟು ಹಾಕಿತ್ತು. ದಾವೂದ್ ಇಬ್ರಾಹಿಂ ಭಾರತದಲ್ಲಿ ನೆಲೆಸಿದ್ದ ಸಂದರ್ಭದಲ್ಲಿ  ಹೋಟೆಲ್ ಬಳಕೆ ಮಾಡಲಾಗುತ್ತಿತ್ತು. ದಾವೂದ್'ನ ಎಲ್ಲಾ ಬೆಲೆಬಾಳುವ ಸ್ವತ್ತುಗಳನ್ನು ಕೇಂದ್ರ ಸರ್ಕಾರ ವಶಕ್ಕೆ ಪಡೆದಿತ್ತು. ಈ ಸ್ವತ್ತುಗಳನ್ನು ನಾಳೆ ಹರಾಜು ನಡೆಸಲು ಸರ್ಕಾರ ನಿರ್ಧರಿಸಿದೆ.

Follow Us:
Download App:
  • android
  • ios