ಮಂಗಳೂರು:  ಎಡಪಂಥೀಯರ ಬಗ್ಗೆ ಹಿಂದೂ ಮುಖಂಡೆಯೊಬ್ಬಳು ವಿವಾದಾತ್ಮಕ ಹೇಳಿಕೆ ನೀಡಿದ್ದು, ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.  

ಮಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯೊಂದರಲ್ಲಿ  ಚೈತ್ರಾ ಕುಂದಾಪುರ ಎಂಬಾಕೆ ಮಾಡಿರುವ ಭಾಷಣದಲ್ಲಿ ಪ್ರಗತಿಪರರನ್ನು ಟೀಕಿಸುವ ಭರದಲ್ಲಿ  ಗೌರಿ ಲಂಕೇಶ್ ಬಗ್ಗೆ ವಿವಾದಾತ್ಮಕವಾಗಿ ಮಾತನಾಡಲಾಗಿದೆ.  

"

ಸಾವಿನಲ್ಲೂ ಸಾರ್ಥಕತೆ ಕಾಣದೇ ಇರುವ ಅತೃಪ್ತ ಆತ್ಮಗಳು ಎಡಚರರು ಮಾತ್ರ.  ಇವರು ಹೆಣಕ್ಕಾಗಿ ಕಾಯುವವರು, ಪ್ರಗತಿಪರರು ಅಥವಾ ವಿಚಾರವಾದಿಗಳಲ್ಲ.  ಇವರು, ದಾಭೋಲ್ಕರ್, ಪನ್ಸಾರೆ ಹೆಣ ಇಟ್ಟುಕೊಂಡು ಬೇಳೆ ಬೇಯಿಸಿಕೊಂಡವರು. ಯಾರ್ಯಾರೋ ಸತ್ತಾಗ, ಯಾವುದೋ ಶವಗಳ ಕಾರಣಕ್ಕೆ ಹಿಂದೂ ಸಂಘಟನೆಗಳ ಮೇಲೆ ಆರೋಪ ಮಾಡ್ತಾರೆ, ಎಂದು ಚೈತ್ರಾ  ಹರಿಹಾಯ್ದಿದ್ದಾರೆ.

ದೇಶದ್ರೋಹಿ ವಿದ್ಯಾರ್ಥಿಗಳಾದ ಉಮರ್ ಖಾಲೀದ್ ಮತ್ತು ಕನ್ಹಯ್ಯನ ಮಹಾತಾಯಿ ಗೌರಿ ಲಂಕೇಶ್.  ನನ್ನ ಮುದ್ದಿನ ಮಕ್ಕಳು ಅಂತ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾಳೆ.  ಆದ್ರೆ ಯಾರು ತಂದೆಯಾಗಿ ಈ ಮಕ್ಕಳಿಗೆ ಜನ್ಮ ಕೊಟ್ಟಿದ್ದಾಳೆ ಅಂತ ಗೊತ್ತಿಲ್ಲ. ಆಕೆ  ದೇಶದ್ರೋಹಿಗಳ ಮಹಾತಾಯಿ, ಆಕೆ ಸತ್ರೆ ಎಸ್ ಐಟಿ ರಚನೆಯಾಗುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.