ಇನ್ಸ್'​ಪೆಕ್ಟರ್ ಖಾದರ್ ಕುರಿತು, 'ನೀನು ಪಿಎಫ್'ಐನ ಏಜೆಂಟ್'ನಂತೆ ವರ್ತಿಸುವುದಾದರೆ, ಗೋರಕ್ಷಕರನ್ನು ಶಿಕ್ಷಿಸುವ ಮುಸ್ಲೀಮನೇ ಆದರೆ, ನಾನು ಹಿಂದೂವಾಗಿ ನಿನಗೆ ರಸ್ತೆಯಲ್ಲಿ ಕಲ್ಲು ಹೊಡೆದು ನಿನ್ನನ್ನು ಹುಚ್ಚುನಾಯಿಯಂತೆ ಯಾಕೆ ಅಟ್ಟಾಡಿಸಬಾರದು' ಎಂದು ಕಿಡಿಕಾರಿದ್ದಾರೆ.

ಮಂಗಳೂರು(ಸೆ.18): ಹಿಂದೂ ಜಾಗರಣ ವೇದಿಕೆ ಮುಖಂಡ ಜಗದೀಶ್ ಕಾರಂತ್ ಇದೀಗ ವಿವಾದದಲ್ಲಿ ಸಿಲುಕಿದ್ದಾರೆ. ಇನ್ಸ್​'ಪೆಕ್ಟರ್'ವೊಬ್ಬರ ವಿರುದ್ಧ ಪ್ರಚೋದನಾತ್ಮಕ ಹೇಳಿಕೆ ನೀಡುವ ಮೂಲಕ ವಿವಾದದ ಕೇಂದ್ರಬಿಂದುವಾಗಿದ್ದಾರೆ.

ಪುತ್ತೂರು ಗ್ರಾಮಾಂತರ ಠಾಣೆ ಇನ್ಸ್'​ಪೆಕ್ಟರ್​ ಖಾದರ್​ ವಿರುದ್ಧ ವಾಗ್ದಾಳಿ ನಡೆಸಿರುವ ಜಗದೀಶ್ ಕಾರಂತ್, ಇನ್ಸ್​'ಪೆಕ್ಟರ್​​ ಖಾದರ್ ತಲೆ ಬೋಳಿಸಿ ಕತ್ತೆಯ ಮೇಲೆ ಮೆರವಣಿಗೆ ಮಾಡಲು ಸಿದ್ಧ . ಖಾದರ್'​ರನ್ನು ಬಟ್ಟೆ ಬಿಚ್ಚಿ ಬೆತ್ತಲೆ ಮಾಡಿ ಬಸ್ ಸ್ಟಾಂಡ್'ನಲ್ಲಿ ಯಾಕೆ ಓಡಿಸಬಾರದು. ರಸ್ತೆಯಲ್ಲಿ ಕಲ್ಲು ಹೊಡೆದು ಹುಚ್ಚು ನಾಯಿಯಂತೆ ಯಾಕೆ ಅಟ್ಟಾಡಿಸಬಾರದು ಎಂಬ ಮಾತುಗಳನ್ನಾಡಿದ್ದಾರೆ.

ಖಾದರ್ ಕುರಿತು, 'ನೀನು ಪಿಎಫ್'ಐನ ಏಜೆಂಟ್'ನಂತೆ ವರ್ತಿಸುವುದಾದರೆ, ಗೋರಕ್ಷಕರನ್ನು ಶಿಕ್ಷಿಸುವ ಮುಸ್ಲೀಮನೇ ಆದರೆ, ನಾನು ಹಿಂದೂವಾಗಿ ನಿನಗೆ ರಸ್ತೆಯಲ್ಲಿ ಕಲ್ಲು ಹೊಡೆದು ನಿನ್ನನ್ನು ಹುಚ್ಚುನಾಯಿಯಂತೆ ಯಾಕೆ ಅಟ್ಟಾಡಿಸಬಾರದು' ಎಂದು ಕಿಡಿಕಾರಿದ್ದಾರೆ.

ಪುತ್ತೂರಿನಲ್ಲಿ ಕಳೆದ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ವಿವಾದಾತ್ಮಕ ಹೇಳಿಕೆ ನೀಡಿ ಪೇಚಿಗೆ ಸಿಲುಕಿದ್ದಾರೆ. ಜಗದೀಶ್ ಕಾರಂತ್ ನಾಲಿಗೆ ಹರಿಬಿಟ್ಟು ಮಾತಾಡಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.