ಹಿಂದೂ ದೇವತೆಗಳ ವಿರುದ್ಧ ಫೇಸ್ ಬುಕ್ ನಲ್ಲಿ ಹಾರೋಹಳ್ಳಿ ರವೀಂದ್ರ ಎನ್ನುವವರು ಅವಹೇಳನಕಾರಿಕಾಗಿ ಪೋಸ್ಟ್ ಮಾಡಿದ್ದು ಅವರ ವಿರುದ್ಧ ದೂರು ನೀಡಲಾಗಿದೆ.

ಬೆಂಗಳೂರು (ಡಿ.28): ಹಿಂದೂ ದೇವತೆಗಳ ವಿರುದ್ಧ ಫೇಸ್ ಬುಕ್ ನಲ್ಲಿ ಹಾರೋಹಳ್ಳಿ ರವೀಂದ್ರ ಎನ್ನುವವರು ಅವಹೇಳನಕಾರಿಕಾಗಿ ಪೋಸ್ಟ್ ಮಾಡಿದ್ದು ಅವರ ವಿರುದ್ಧ ದೂರು ನೀಡಲಾಗಿದೆ.

ಕೇಂದ್ರ ಸಚಿವ ಅನಂತ್‌'ಕುಮಾರ್ ಹೆಗಡೆ ನಿಂದಿಸೋ ಭರದಲ್ಲಿ ಹಿಂದೂ ದೇವತೆಗಳಿಗೆ ಅವಮಾನ ಮಾಡಿದ್ದಾರೆ. ದೇವರುಗಳ ಲೈಂಗಿಕ ಕ್ರಿಯೆ ಬಗ್ಗೆ ಫೇಸ್'ಬುಕ್'ನಲ್ಲಿ ನಿಂದನೆ ಮಾಡಿದ್ದಾರೆ. ಸೀತಾಮಾತೆಗೆ ಲಕ್ಷ್ಮಣನ ಜೊತೆ ಅನೈತಿಕ ಸಂಬಂಧ ಇತ್ತು. ಸೀತೆ ತಾನಾಗಿಯೇ ರಾವಣನ ಬಳಿ ಲೈಂಗಿಕ ಸುಖಕ್ಕಾಗಿ ಹೋಗಿದ್ದಳು ಎಂದು ಪೋಸ್ಟ್ ಮಾಡಿದ್ದು, ಇದಕ್ಕೆ ಜಾಲತಾಣಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನ ವಿವಿಯಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿರೋ ರವೀಂದ್ರ ಮೈಸೂರು ವಿವಿಯ ಪ್ರೋ.ಮಹೇಶ್‌'ಚಂದ್ರ ಗುರು ಮಾರ್ಗದರ್ಶನದಲ್ಲಿ ಪಿಎಚ್‌ಡಿ ಸಂಶೋಧನೆ ಮಾಡುತ್ತಿದ್ದಾರೆ.