ಮುಂಬಯಿ(ಅ.10): : ಬಾಲಿವುಡ್'ನ ಖ್ಯಾತ ನಟಿ ಶಿಲ್ಪಾ ಶೆಟ್ಟಿಯ ಸುರೇಂದ್ರ ಶೆಟ್ಟಿ ಹೃದಯಾಘಾತದಿಂದ ನಿನ್ನೆ ಮಧ್ಯಾಹ್ನ ವಿಧಿ ವಶರಾಗಿದ್ದಾರೆ.

ಟ್ಯಾಂಪರ್ ಪ್ರೂಫ್ ವಾಟರ್ ಕ್ಯಾಪ್ಸ್ ತಯಾರಕರಾಗಿದ್ದ ಸುರೇಂದ್ರ ಶೆಟ್ಟಿ ಇಂಡೋ ಚೈನೀಸ್ ಡ್ರಾಮಾ ಎಂಬ ಸಿನಿಮಾ ನಿರ್ಮಿಸಿದ್ದರು. ಆದರೆ ದುರಾದೃಷ್ಠವಶಾತ್ ಆ ಚಿತ್ರ ಈವರೆಗೂ ಬಿಡುಗಡೆಯಾಗಲೇ ಇಲ್ಲ.

ತೀವ್ರ ಹದಯಾಘಾತದಿಂದಾಗಿ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಾಗಿದ್ದ ಸುರೇಂದ್ರ ಶೆಟ್ಟಿ ನಿನ್ನೆ ಮಧ್ಯಾಹ್ನ ನಿಧನರಾಗಿದ್ದಾರೆ. ಸುರೇಂದ್ರ ಶೆಟ್ಟಿ ಪತ್ನಿ ಸುನಂದಾ ಪುತ್ರಿಯರಾದ ಶಿಲ್ಪಾ ಶೆಟ್ಟಿ ಹಾಗೂ ಶಮಿತಾ ಶೆಟ್ಟಿ ಅವರನ್ನು ಅಗಲಿದ್ದಾರೆ.