ತಮ್ಮ ಆಪ್ತನೊಬ್ಬ ಕೈಯಲ್ಲಿ ಹಿಡಿದು ಕೊಂಡಿದ್ದ ಟಾರ್ಚ್ ಅನ್ನು ಮಮತಾ ಪಡೆಯುತ್ತಾರೆ. ಮೈಕ್ ಎಂದು ಭಾವಿಸಿ ಅದನ್ನು ಹಿಡಿದುಕೊಂಡು ಮಾತನಾಡಲು ಆರಂಭಿಸುತ್ತಾರೆ. ಪಕ್ಕದ ವ್ಯಕ್ತಿ ಅದು ಮೈಕ್ ಅಲ್ಲ ಎಂದು ತಿಳಿಸಿದ ಬಳಿಕ, ತಪ್ಪಿನ ಅರಿವಾಗಿ ಅವರು ಅದನ್ನು ಹಿಂದಿರುಗಿಸುವ ದೃಶ್ಯವಿದೆ.

ಕೋಲ್ಕತಾ(ಡಿ.1): ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವೇದಿಕೆಯೊಂದರಲ್ಲಿ ಮಾತನಾಡಲು ಮೈಕ್ ಬದಲು ಟಾರ್ಚ್ ಬಳಸಿದ ದೃಶ್ಯವಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. 16 ಸೆಕೆಂಡ್‌ಗಳ ಈ ವೀಡಿಯೊದಲ್ಲಿ ಅವರು ವೇದಿಕೆಯಲ್ಲಿ ಭಾಷಣಕ್ಕೆ ಸಿದ್ಧರಾಗುವ ದೃಶ್ಯವಿದೆ.

ತಮ್ಮ ಆಪ್ತನೊಬ್ಬನ ಕೈಯಲ್ಲಿ ಹಿಡಿದು ಕೊಂಡಿದ್ದ ಟಾರ್ಚ್ ಅನ್ನು ಮಮತಾ ಪಡೆಯುತ್ತಾರೆ. ಮೈಕ್ ಎಂದು ಭಾವಿಸಿ ಅದನ್ನು ಹಿಡಿದುಕೊಂಡು ಮಾತನಾಡಲು ಆರಂಭಿಸುತ್ತಾರೆ. ಪಕ್ಕದ ವ್ಯಕ್ತಿ ಅದು ಮೈಕ್ ಅಲ್ಲ ಎಂದು ತಿಳಿಸಿದ ಬಳಿಕ, ತಪ್ಪಿನ ಅರಿವಾಗಿ ಅವರು ಅದನ್ನು ಹಿಂದಿರುಗಿಸುವ ದೃಶ್ಯ ವೀಡಿಯೊದಲ್ಲಿದೆ.