ಮಂಕಾದಂತೆ ಕಾಣುತ್ತಿರುವ ದೇಶದ ಆರ್ಥಿಕ ಚಟು ವಟಿಕೆಗಳಿಗೆ ಉತ್ತೇಜನ ನೀಡುವ ‘ಭಾರತಮಾಲಾ’ ಸೇರಿದಂತೆ ಬೃಹತ್ ಹೆದ್ದಾರಿ ನಿರ್ಮಾಣ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ. ಇದರ ಅನ್ವಯ 6.92 ಲಕ್ಷ ಕೋಟಿ ರು. ವೆಚ್ಚದಲ್ಲಿ ಮುಂದಿನ 5 ವರ್ಷದಲ್ಲಿ 83,667 ಕಿ.ಮೀ. ಹೆದ್ದಾರಿಗಳು ನಿರ್ಮಾಣವಾಗಲಿವೆ. ಪ್ರಧಾನಿ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ಯೋಜನೆಗೆ ಅನುಮೋದನೆ ನೀಡಲಾಯಿತು ಎಂದು ಸಭೆಯ ಬಳಿಕ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ಇತರ ಹಿರಿಯ ಅಧಿಕಾರಿಗಳು ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನವದೆಹಲಿ(ಅ.25): ಮಂಕಾದಂತೆ ಕಾಣುತ್ತಿರುವ ದೇಶದ ಆರ್ಥಿಕ ಚಟು ವಟಿಕೆಗಳಿಗೆ ಉತ್ತೇಜನ ನೀಡುವ ‘ಭಾರತಮಾಲಾ’ ಸೇರಿದಂತೆ ಬೃಹತ್ ಹೆದ್ದಾರಿ ನಿರ್ಮಾಣ ಯೋಜನೆಗಳಿಗೆ ಕೇಂದ್ರ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ. ಇದರ ಅನ್ವಯ 6.92 ಲಕ್ಷ ಕೋಟಿ ರು. ವೆಚ್ಚದಲ್ಲಿ ಮುಂದಿನ 5 ವರ್ಷದಲ್ಲಿ 83,667 ಕಿ.ಮೀ. ಹೆದ್ದಾರಿಗಳು ನಿರ್ಮಾಣವಾಗಲಿವೆ. ಪ್ರಧಾನಿ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ಯೋಜನೆಗೆ ಅನುಮೋದನೆ ನೀಡಲಾಯಿತು ಎಂದು ಸಭೆಯ ಬಳಿಕ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ಇತರ ಹಿರಿಯ ಅಧಿಕಾರಿಗಳು ಜಂಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪವರ್ ಪಾಯಿಂಟ್ ಪ್ರಸ್ತುತಿಯನ್ನೂ ಇದೇ ಸಂದರ್ಭದಲ್ಲಿ ನೀಡಿದರು. ಇಷ್ಟೊಂದು ಬೃಹತ್ ಪ್ರಮಾ ಣದ ಯೋಜನೆಯಿಂದ ಭಾರಿ ಪ್ರಮಾಣದ ಉದ್ಯೋಗಾವಕಾಶ ದೊರಕಲಿದೆ. 14.2 ಕೋಟಿ ಮಾನವ ದಿನಗಳಷ್ಟು ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ಅವರು ಹೇಳಿದರು.
‘ಭಾರತಮಾಲಾ:
ಒಟ್ಟಾರೆ ಹೆದ್ದಾರಿ ಯೋಜನೆಗಳಲ್ಲಿ ‘ಭಾರತಮಾಲಾ’ ಯೋಜನೆಯ ಅಡಿ 34,800 ಕಿ. ಮೀ. ಹೆದ್ದಾರಿಯನ್ನು ಅಭಿವೃದ್ಧಿಪಡಿಸಲಾಗು ತ್ತದೆ. ಇದಕ್ಕಾಗಿ 5.35 ಲಕ್ಷ ಕೋಟಿ ರು. ವಿನಿಯೋಗಿಸಲಾಗುತ್ತದೆ. ದೇಶದ ಗಡಿ, ಬಂದರು ಹಾಗೂ ವಿವಿಧ ಪ್ರಮುಖ ತಾಣಗಳನ್ನು ಒಂದಕ್ಕೊಂದು ಸಂಪರ್ಕಿಸುವ ಉದ್ದೇಶದಿಂದ ‘ಭಾರತ ಮಾಲಾ’ ಯೋಜನೆ ಸಿದ್ಧಪಡಿಸಲಾಗಿದೆ. 2022ರೊಳಗೆ ಯೋಜನೆ ಮುಕ್ತಾಯದ ಗುರಿ ಹಾಕಿಕೊಳ್ಳಲಾಗಿದೆ. ಇದರಲ್ಲಿ ಆರ್ಥಿಕ ಕಾರಿಡಾರ್ 9 ಸಾವಿರ ಕಿ.ಮೀ., ಆಂತರಿಕ ಕಾರಿಡಾರ್ ಹಾಗೂ ಫೀಡರ್ ಮಾರ್ಗ 6000 ಕಿ.ಮೀ., ಕ್ಷಮತೆ ಹೆಚ್ಚಳದ ನ್ಯಾಷನಲ್ ಕಾರಿಡಾರ್ 5000 ಕಿ.ಮೀ, ಗಡಿ ರಸ್ತೆಗಳು ಹಾಗೂ ಅಂತಾರಾಷ್ಟ್ರೀಯ ಸಂಪರ್ಕ 2000 ಕಿ.ಮೀ, ಕರಾವಳಿ ರಸ್ತೆಗಳು ಮತ್ತು ಬಂದರು ಸಂಪರ್ಕ 2000 ಕಿ.ಮೀ, ಗೋಲ್ಡನ್ ಫೀಲ್ಡ್ ಎಕ್ಸ್'ಪ್ರೆಸ್ ಹೆದ್ದಾರಿಗಳು 800 ಕಿ.ಮೀ, ಬಾಕಿ ಉಳಿದ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಯೋಜನೆಯ 10 ಸಾವಿರ ಕಿ.ಮೀ. ಸೇರಿವೆ. 800ಸಾಗರಮಾಲಾ ಅಡಿ ಅಭಿವೃದ್ಧಿಗೊಳ್ಳುವ ಬಂದರುಗಳಿಗೆ ಉತ್ತಮ ಹೆದ್ದಾರಿ ಸಂಪರ್ಕ ಕಲ್ಪಿಸಲು ಅನುವಾಗುವಂತೆ ‘ಭಾರತ ಮಾಲಾ ಯೋಜನೆಯ ಕರಾವಳಿ ಮತ್ತು ಬಂದರು ಸಂಪರ್ಕ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಇನ್ನುಳಿದಂತೆ ಗಡಿ ರಸ್ತೆಗಳು ಹಾಗೂ ಪ್ರಮುಖ ಈಶಾನ್ಯ ಹೆದ್ದಾರಿಗಳನ್ನೂ ಒಂದಕ್ಕೊಂದು ಬೆಸೆಯಲಾಗುತ್ತದೆ.
ಇತರ ಯೋಜನೆಗಳ ಅಡಿ 48 ಸಾವಿರ ಕಿ.ಮೀ.:
‘ಭಾರತಮಾಲಾ ಹೊರತುಪಡಿಸಿ ಇತರ ಹೆದ್ದಾರಿ ನಿರ್ಮಾಣ ಯೋಜನೆಗಳ ಅಡಿ 48 ಸಾವಿರ ಕಿ.ಮೀ. ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ರಸ್ತೆಗಳು, ಹೆದ್ದಾರಿಗಳ ನಿರ್ಮಾಣವಾಗಲಿದೆ. ಈಶಾನ್ಯ ಹಾಗೂ ಮಾವೋವಾದಿ ಉಪಟಳ ದಿಂದ ತತ್ತರಿಸಿರುವ ಸ್ಥಳಗಳಿಗೆ ಕೂಡ ಹೆದ್ದಾರಿ ನಿರ್ಮಿಸಲಾಗುತ್ತದೆ. 44 ಆರ್ಥಿಕ ಕಾರಿಡಾರ್'ಗಳನ್ನು ಗುರುತಿಸಲಾಗಿದೆ.
