ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ತಲೆದಂಡ ಬಿ.ಎಲ್.ಸಂತೋಷ್​ ವಿರುದ್ಧ ಕಿಡಿಕಾರಿದ್ದ ಗೋ. ಮಧುಸೂದನ್​ಗೆ ಕಿಕ್​ಔಟ್​ ಶಿಕ್ಷೆ..!?

ಬೆಂಗಳೂರು: ಬಿಜೆಪಿ ರಾಷ್ಟ್ರಿಯ ಅದ್ಯಕ್ಷ ಅಮಿತ್ ಶಾ ನಿನ್ನೆ ರಾಜ್ಯ ನಾಯಕರೊಂದಿಗೆ ಸಭೆ ನಡೆಸಿ ಹೋದ ಬೆನ್ನಲ್ಲೇ ರಾಜ್ಯ ಬಿಜೆಪಿಗೆ ಶಾಕ್ ಟ್ರೀಟ್'ಮೆಂಟ್ ನೀಡಿದ್ದಾರೆ.

ಮಾಜಿ ವಿಧಾನ ಪರಿಷತ್ತು ಸದಸ್ಯ ಗೋ. ಮಧುಸೂದನ್ ಅವರನ್ನು ರಾಜ್ಯ ಬಿಜೆಪಿ ವಕ್ತಾರ ಹುದ್ದೆಯಿಂದ ಕೊಕ್ ನೀಡಲಾಗಿದೆ.

ಇಂದು ಬೆಳಗ್ಗೆ ನಡೆದ ಸಭೆಯಲ್ಲಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್, ಯಾವುದೇ ಮಾಧ್ಯಮದ ಚರ್ಚೆಯಲ್ಲಿ ಭಾಗವಹಿಸದಂತೆ ಗೋ. ಮಧುಸೂದನ್​ಗೆ ಸೂಚನೆ ನೀಡಿದ್ದಾರೆ.

ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್​ ವಿರುದ್ಧ ಕಿಡಿಕಾರಿದ್ದ ಗೋ. ಮಧುಸೂದನ್​'ಗೆ ಕಿಕ್'ಔಟ್ ಶಿಕ್ಷೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಅನಿರೀಕ್ಷಿತ ಬೆಳವಣಿಗೆಗಳು ರಾಜ್ಯ ಬಿಜೆಪಿಯಲ್ಲಿ ಮತ್ತೆ ಬಿ.ಎಲ್. ಸಂತೋಷ್​ ಹವಾ ಕೆಲಸ ಮಾಡುತ್ತಿದೆಯೆಂದು ಸ್ಪಷ್ಟವಾಗಿದೆ.

ಅಮಿತ್​ ಶಾ ಬಂದು ಹೋದ ಬೆನ್ನಲ್ಲೇ ಸಂತೋಷ್​ ವಿರುದ್ಧ ತೆಗೆದುಕೊಂಡಿರುವ ನಿರ್ಧಾರ, ರಾಜ್ಯ ಬಿಜೆಪಿಯಲ್ಲಿ ನಾಯಕರ‌ ನಡುವಣ ಮತ್ತೆ ಸಂಘರ್ಷ ಮುಂದುವರಿದಿದೆ ಎಂದು ತೋರಿಸಿದೆ.