ಬೆಂಗಳೂರು[ಜ.11]  ಬೆಂಗಳೂರಿನ ರಹಸ್ಯ ಸ್ಥಳದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಇಡಲಾಗಿದೆ. ಭಾರೀ ಪೊಲೀಸ್ ಭದ್ರತೆಯಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಭಟ್ ಇದ್ದಾರೆ.

ಸುವರ್ಣ ನ್ಯೂಸ್‌ಗೆ  ಕಲ್ಲಡ್ಕ ಪ್ರಭಾಕರ ಭಟ್ ತಮಗೆ ಬಿಗಿ ಭದ್ರತೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಮೂರು ದಿನಗಳ ಕಾಲ ಈ ಜಾಗ ಬಿಟ್ಟು ಕದಲದಂತೆ ಪೊಲೀಸರು ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಭಟ್ಟರ ಶಾಲಾ ಮಕ್ಕಳ ಅನ್ನ ಕಸಿದುಕೊಂಡಿದ್ದ ಹಿಂದಿನ ಸರಕಾರ

ಜೀವಕ್ಕೆ ಅಪಾಯ ಇರುವ ಹಿನ್ನೆಲೆಯಲ್ಲಿ ರಹಸ್ಯ ಸ್ಥಳದಲ್ಲಿ ಇದ್ದೇನೆ. ನನಗೆ ನಾಳೆ, ನಾಡಿದ್ದು ಮಂಗಳೂರಿನಲ್ಲಿ ಸಾಕಷ್ಟು ಕಾರ್ಯಕ್ರಮಗಳಿತ್ತು. ಆದರೆ ಪೊಲೀಸರು ಬೆದರಿಕೆ ಹಿನ್ನೆಲೆಯಲ್ಲಿ ಇಲ್ಲಿಗೆ ಕರೆದುಕೊಂಡು ಬಂದಿದ್ದಾರೆ. ಇನ್ನು ಮೂರು ದಿನ ಇಲ್ಲಿಂದ ಎಲ್ಲಿಗೂ ಹೋಗುವಂತಿಲ್ಲ. ನಾನು ಹಿಂದುತ್ವದ ಪರವಾಗಿ ‌ಮತ್ತು‌ ಉಗ್ರಗಾಮಿಗಳ ವಿರುದ್ದ ಮಾತನಾಡಿದ್ದಕ್ಕೆ ಹತ್ಯೆಗೆ ಸ್ಕೆಚ್ ಹಾಕಿರಬಹುದು ಎಂದು ಭಟ್ ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಉನ್ನತ ಪೊಲೀಸ್ ಅಧಿಕಾರಿಗಳು ಬೆಳಿಗ್ಗೆ ಬಂದು ಭೇಟಿ ಮಾಡಿದ್ದರು. ನಂತರ  ಪೊಲೀಸ್ ಜೀಪ್ ಸಹಿತ ಬಿಗಿ ಭದ್ರತೆ ಒದಗಿಸಿದ್ದಾರೆ. ಸದ್ಯ ನಾನಿರುವ ಜಾಗದ ಬಗ್ಗೆ ಮಾಹಿತಿ ನೀಡುವಂತಿಲ್ಲ ಎಂದೂ ಭಟ್ಟರು ಹೇಳಿದ್ದಾರೆ.