ಬೆಂಗಳೂರು, (ಸೆ.16): ಕಳ್ಳತನ ಮಾಡಲೆಂದು ವಿಮಾನದ ಮೂಲಕ ದೆಹಲಿಯಿಂದ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬುರುತ್ತಿದ್ದ  ಹೈಫೈ ಕಳ್ಳ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ದೆಹಲಿಯ ಚೋರ್ ಬಜಾರ್ ನಿಂದ ಬರ್ತಿದ್ದ ಖತರ್ನಾಕ್ ಕಳ್ಳನ ಹೆಡೆಮುರಿ ಕಟ್ಟುವಲ್ಲಿ ಜೀವನ್ ಭೀಮನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಹರ್ಮಾನ್ ಖಾನ್ ಅಲಿಯಾಸ್ ಸೋನು ಬಂಧಿತ ಖತರ್ನಾಕ್ ಕಳ್ಳ.

ದೆಹಲಿಯಿಂದ ಬೆಂಗಳೂರಿಗೆ ಬಂದು ಕಾಲೇಜು ವಿದ್ಯಾರ್ಥಿಯಂತೆ ಪೋಜ್​ ಕೊಡುತ್ತಿದ್ದ ಈ ಐನಾತಿ ಅಸಾಮಿ, ಸಿನಿಮಾ ಶೈಲಿಯಲ್ಲಿ ಕಳ್ಳತನಕ್ಕಿಳಿಯುತ್ತಿದ್ದ. ಇಲ್ಲಿ ಕದ್ದ ಚಿನ್ನವನ್ನೆಲ್ಲಾ ದೆಹಲಿಯ ಚೋರ್ ಬಜಾರ್ ನಲ್ಲಿ ಮಾರಾಟ ಮಾಡುತ್ತಿದ್ದ. 

ಈ ಬಗ್ಗೆ ಜೀವನ್ ಭೀಮನಗರ ಪೊಲೀಸರ ಗಮನಕ್ಕೆ ಬಂದಿದ್ದು, ಕಾರ್ಯಚರಣೆ ನಡೆಸಿದ್ದಾರೆ. ಆ ವೇಳೆ ಹೈಫೈ ಕಳ್ಳ ಹರ್ಮಾನ್ ಖಾನ್ ಅಲಿಯಾಸ್ ಸೋನು ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಹರ್ಮಾನ್ ಖಾನ್ ನಿಂದ ಕೆಜಿಗಟ್ಟಲೇ ಚಿನ್ನವನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.