Asianet Suvarna News Asianet Suvarna News

ಚಂಡಮಾರುತ ಮುನ್ಸೂಚನೆ: ಎರಡು ರಾಜ್ಯಗಳಿಗೆ ಎಚ್ಚರಿಕೆ ಕೊಟ್ಟ AMD

ಬಂಗಾಳಕೊಲ್ಲಿಯಲ್ಲಿ  ಅಪ್ಪಳಿಸಿರುವ 'ಫೆಥಾಯ್' ಚಂಡಮಾರುತ ಹಿನ್ನಲೆಯಲ್ಲಿ ಎರಡು ರಾಜ್ಯಗಳಿಗೆ ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ.

High alert  in Andhra Pradesh and Tamil Nadu for Bengal intensified into cyclonic storm
Author
Bengaluru, First Published Dec 16, 2018, 8:24 PM IST

ಒಡಿಸ್ಸಾ, [ಡಿ.16]: ವರ್ಧಾ ಚಂಡಮಾರುತಕ್ಕೆ ತತ್ತರಿಸಿದ್ದ ಆಂಧ್ರಪ್ರದೇಶ ಮತ್ತು ತಮಿಳುನಾಡಿಗೆ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ.

ಬಂಗಾಳಕೊಲ್ಲಿಯಲ್ಲಿ  ಅಪ್ಪಳಿಸಿರುವ 'ಫೆಥಾಯ್' ಚಂಡಮಾರುತ ಈಗ ಆಂಧ್ರ ಮತ್ತು ಚೆನ್ನೈನ ತಮಿಳುನಾಡಿನ ಕರಾವಳಿ ಪ್ರದೇಶಗಳ ಕಡೆಗೆ ಸಾಗುತ್ತಿದೆ. ಈ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ರಾಷ್ಟ್ರೀಯ ವಿಪತ್ತು ಪಡೆ ಎಚ್ಚರಿಸಿದೆ.

 ಚಂಡಮಾರುತವು ಸೋಮವಾರ ಓಂಗೋಲ್ ಮತ್ತು ಕಾಕಿನಾಡದ ನಡುವೆ ಕರಾವಳಿ ದಾಟುವ ಸಾಧ್ಯತೆ ಇದೆ.  ದಕ್ಷಿಣ ಆಂಧ್ರಪ್ರದೇಶ, ಉತ್ತರ ತಮಿಳುನಾಡು ಮತ್ತು ಪುದುಚೇರಿ ಕರಾವಳಿಯಲ್ಲಿ 45-55 ಕಿ.ಮೀ. ಮತ್ತು 65 ಕಿ.ಮೀ. ವೇಗದಲ್ಲಿ ಚಂಡಮಾರುತ ಧಾವಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಅಷ್ಟೇ ಅಲ್ಲದೇ ಇಂದು [ಭಾನುವಾರ] ಮತ್ತು ನಾಳೆ [ಸೋಮವಾರ] ಆಂಧ್ರಪ್ರದೇಶ ಕರಾವಳಿಯಿಂದ ಮೀನುಗಾರಿಕೆ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ರದ್ದುಪಡಿಸಬೇಕೆಂದು ಐಎಂಡಿ ಕರೆ ಸೂಚಿಸಿದೆ. ಈ ಚಂಡಮಾರುತದಿಂದಾಗಿ ತಮಿಳುನಾಡು ಮತ್ತು ಆಂಧ್ರ ಪ್ರದೇಶ ಕೆಲ ಭಾಗದ ಜನರಿಗೆ ಆತಂಕ ಸೃಷ್ಟಿ ಮಾಡಿದೆ.

Follow Us:
Download App:
  • android
  • ios