ಮಂಗಳವಾರದಿಂದ ಆರಂಭವಾಗುವ ವಾರ್ಷಿಕ ಮಂಡಲ ಉತ್ಸವಕ್ಕೆ ತೆರೆಯಲಿರುವ ದೇಗುಲ ಜನವರಿ 20ರಂದು ಮುಚ್ಚಲಿದೆ.

ಶಬರಿಮಲೆ (ನ.13): ದಕ್ಷಿಣ ಭಾರತದ ಪ್ರಸಿದ್ದ ಶಕ್ತಿ ಕೇಂದ್ರಗಳಲ್ಲೊಂದಾದ ಶಬರಿಮಲೆ ಅಯ್ಯಪ್ಪನ ಸನ್ನಿಧಿ ಇದೇ ಮಂಗಳವಾರ ಭಕ್ತಾಧಿಗಳಿಗೆ ತೆರೆಯಲಿದೆ. ಮಂಗಳವಾರದಿಂದ ಆರಂಭವಾಗುವ ವಾರ್ಷಿಕ ಮಂಡಲ ಉತ್ಸವಕ್ಕೆ ತೆರೆಯಲಿರುವ ದೇಗುಲ ಜನವರಿ 20ರಂದು ಮುಚ್ಚಲಿದೆ. ಈ ವಾರ್ಷಿಕ ಉತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ಅದರೆ ಇದರ ಬೆನ್ನಲ್ಲೆ ಶಬರಿಮಲೆಯ ಮೇಲೆ ಉಗ್ರರು ಕಣ್ಣಿಟ್ಟಿದ್ದಾರೆ ಎಂದು ಗುಪ್ತಚರ ಇಲಾಖೆಯ ನಿಖರ ಮಾಹಿತಿಯ ಮೆರೆಗೆ ಕೇಂದ್ರ ಗೃಹ ಸಚಿವಾಲಯದಿಂದ ಕೇರಳ ಸರ್ಕಾರದ ಪ್ರಧಾನ ಕಾರ್ಯಾದರ್ಶಿ ಎಸ್ ಎಂ ವಿಜಯಾನಂದ್ ರವರಿಗೆ ಪತ್ರವನ್ನು ಬರೆಯಲಾಗಿದೆ. ಇದರಿಂದಾಗಿ ಸದ್ಯ ಕೇರಳದಾದ್ಯಂತ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು ಎಲ್ಲೇಡೆ ಹೈ ಅಲರ್ಟ್​ ಘೋಷಿಸಲಾಗಿದೆ.